ಎಕ್ಸೆಲ್ ನಲ್ಲಿ ಅ. 29ರಂದು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ‘ ಶೋಧ ‘ ರಾಜ್ಯ ಮಟ್ಟದ ವಿಜ್ಞಾನ – ಕಲಾ ಸ್ಪರ್ಧೆಗಳು

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅ. 29 ರಂದು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಶೋಧ 2022 ಹೆಸರಿನಲ್ಲಿ ವಿಜ್ಞಾನ – ಕಲಾ ಸ್ಪರ್ಧೆಗಳು ನಡೆಯಲಿವೆ.

ವಿಜ್ಞಾನ ಮಾದರಿ, ವಿಜ್ಞಾನ ರಸಪ್ರಶ್ನೆ, ಇಂಗ್ಲೀಷ್ ಭಾಷಣ,ಕನ್ನಡ ಭಾಷಣ, ಇಂಗ್ಲೀಷ್ ಪ್ರಬಂಧ, ಕನ್ನಡ ಪ್ರಬಂಧ , ಪೆನ್ಸಿಲ್ ಡ್ರಾಯಿಂಗ್, ವರ್ಣ ಚಿತ್ರ, ಛದ್ಮ ವೇಷ ಸ್ಪರ್ಧೆ, ರಂಗೋಲಿ,ಚದುರಂಗ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಗಳಲ್ಲೂ ಪ್ರಥಮ , ದ್ವಿತೀಯ, ತೃತೀಯ ಬಹುಮಾನ ವಿಜೇತರಿಗೆ ತಲಾ 3000,2000,1000 ಮೊತ್ತದೊಂದಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು.

ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ, ಅತ್ಯಧಿಕ ಬಹುಮಾನ ಗಳಿಸಿ ಪ್ರಥಮ ಸ್ಥಾನ ಪಡೆಯುವ ಪ್ರೌಢ ಶಾಲೆಗೆ ರೂಪಾಯಿ 15000 ಜೊತೆಗೆ ಚಾಂಪಿಯನ್ ಶಿಪ್, ದ್ವಿತೀಯ ಸ್ಥಾನ ಪಡೆಯುವ ಶಾಲೆಗೆ ರೂ. 10000 ಹಾಗೂ ಚಾಂಪಿಯನ್ ಶಿಪ್ ಹಾಗೂ ತೃತೀಯ ಸ್ಥಾನ ಪಡೆಯುವ ಪ್ರೌಢ ಶಾಲೆಗೆ ರೂಪಾಯಿ 7000 ಹಾಗೂ ಚಾಂಪಿಯನ್ ಶಿಪ್ ನೀಡಲು ತೀರ್ಮಾನಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ 9448857459(ಪುರುಷೋತ್ತಮ್) 7411831005(ಜಯರಾಂ) 9741969990(ವಿಕಾಸ್ ಹೆಬ್ಬಾರ್) ಅವರನ್ನು ಸಂಪರ್ಕಿಸಬಹುದು ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ .

 

LEAVE A REPLY

Please enter your comment!
Please enter your name here