ಮರೋಡಿ:ಅರುಣೋದಯ ಯುವಕ ಮಂಡಲದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ: ಒಟ್ಟು 130 ಮಂದಿ ಸೇವಾ ವ್ಯವಹಾರಗಳನ್ನು ಸಾರ್ವಜನಿಕರು ಪಡೆದುಕೊಂಡರು

0

ಮರೋಡಿ:   ಅರುಣೋದಯ ಯುವಕ ಮಂಡಲ ಮರೋಡಿ ಇವರ ಆಶ್ರಯದಲ್ಲಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಭಾಗಿತ್ವದಲ್ಲಿ ಅ.14ರಂದು  ಮರೋಡಿ ಅರುಣೋದಯ ಯುವಕ ಮಂಡಲ ಇದರ ಸಭಾಭವನದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಹಾಗೂ ಹೊಸ ಪಾನ್ ಕಾರ್ಡ್, ಇ ಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್/ಅಭಾ ಕಾರ್ಡ್,ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆ,ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಜೋಡಣೆ ಮತ್ತು ಇನ್ನಿತರ ಸಿ ಎಸ್ ಸಿ ಸೇವೆಗಳನ್ನು ನೀಡಲಾಯಿತು.

ಒಟ್ಟು ಆಧಾರ್ ನೋಂದಣಿ ಮತ್ತು ತಿದ್ದುಪಡಿ 52, ಆಯುಸ್ಮಾನ್ ಕಾರ್ಡ್/ಆಭಾ ಕಾರ್ಡ್ 50, ಅಫಘಾತ ವಿಮೆ 12 ಐಪಿಪಿಬಿ ಖಾತೆ 3 ಇನ್ನಿತರ ಸಿ ಎಸ್ ಸಿ ವ್ಯವಹಾರ ಎಲ್ಲಾ ಸೇವೆಗಳು ಸೇರಿ ಒಟ್ಟು 130 ಜನ ಸೇವಾ ವ್ಯವಹಾರಗಳನ್ನು ಸಾರ್ವಜನಿಕರು ಪಡೆದುಕೊಂಡರು.

ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಪದ್ಮಶ್ರೀ ಜೈನ್,  ಯುವಕ ಮಂಡಲದ ಅಧ್ಯಕ್ಷ ನವೀನ್ ಕೋಟ್ಯಾನ್,  ಯುವಕ ಮಂಡಲದ ಗೌರವಾಧ್ಯಕ್ಷ ಜಯಂತ್ ಕೋಟ್ಯಾನ್ , ಗ್ರಾಮ ಪಂಚಾಯತ್  ಸದಸ್ಯ ಅಶೋಕ್ ಕೋಟ್ಯಾನ್,ಅಂಚೆ ಇಲಾಖೆಯ ಅಧಿಕಾರಿ ಲೋಕನಾಥ ಎಂ , ಸಹಾಯಕ ಅಂಚೆ ಅಧೀಕ್ಷಕರು ಬಂಟ್ವಾಳ ಉಪ ವಿಭಾಗ ಶಿಹಾಸ್ , ಐಪಿಪಿಬಿ ಅಧಿಕಾರಿ ಮಂಗಳೂರು ಶಾಖೆ ಹಾಗೂ ಅಂಚೆ ಪಾಲಕರದ ಹರೀಶ್  ಉಪಸ್ಥಿತರಿದ್ದರು.

ಯುವಕ ಮಂಡಲದ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ ನಿರೂಪಿಸಿ,ವಂದಿಸಿದರು.  ಯುವಕ ಮಂಡಲದ ಕಾರ್ಯದರ್ಶಿ ಅರ್ಹತ್ ಜೈನ್, ಹರೀಶ್ ,ರಾಜು ಟೈಲರ್ ಮತ್ತಿತರರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here