ಕಣಿಯೂರು ಗ್ರಾ.ಪಂ ಗ್ರಾಮ ಸಭೆ

0

ಪದ್ಮುಂಜ:  ಇಲ್ಲಿಯ ಕಣಿಯೂರು ಗ್ರಾಮ ಪಂಚಾಯಿತಿಯ 22/23ನೇ ಸಾಲಿನ ಪ್ರಥಮ ಗ್ರಾಮ ಸಭೆಯು ಅ 15ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಯವರ ಅಧ್ಯಕ್ಷತೆಯಲ್ಲಿ ಪದ್ಮುಂಜ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.

ಪಶುಸಂಗೋಪನಾ ಇಲಾಖಾಧಿಕಾರಿ ಮಂಜು ನಾಯ್ಕ ರವರು ನೋಡಲ್ ಅಧಿಕಾರಿ ಯಾಗಿ ಸಭೆ ನಡೆಸಿಕೊಟ್ಟರು. ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ರವರು ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಕಂದಾಯ ಇಲಾಖೆಯಿಂದ ಉರುವಾಲು ವಿ ಎ ರಫೀಖ್ಆ, ರೋಗ್ಯ ಇಲಾಖೆಯಿಂದ ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ನಂದನಾ, ಅರಣ್ಯ ಇಲಾಖೆಯಿಂದ ಜರಾಲ್ಡ್ ಡಿ ಸೋಜ, ಮೆಸ್ಕಾಂ ನಿಂದ ಪ್ರಸನ್ನ, ಶಿಕ್ಷಣ ಇಲಾಖೆಯಿಂದ ಕೆ ಪಿ ಮುಹಮ್ಮದ್ ಶರೀಫ್ ಸಿ ಆರ್ ಪಿ , ಇಂಜಿನಿಯರ್ ವಿಭಾಗ ದಿಂದ ಗಫೂರ್, ಕೃಷಿ ಇಲಾಖೆಯಿಂದ ಚಂದ್ರಕಲಾ, ಸಾಕ್ಷರತಾ ಕೇಂದ್ರದಿಂದ ಉಷಾ ಬಿ ನಾಯಕ್,  ಆಯುರ್ವೇದ ಆಯುಶ್ ಕೇಂದ್ರದಿಂದ ವೈಧ್ಯಾದಿಕಾರಿ ಸಹನಾರವರು ತಮ್ಮ ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯ ಗಳನ್ನು ವಿವರಿಸಿದರು.

ಬೇಡಿಕೆಗಳು:ಪಂಚಾಯತ್ ದಾಖಲೆ ಪತ್ರಗಳನ್ನು ಹೊರಗಡೆ ಕಳುಹಿಸಿ ಸಾವಿರಾರು ರೂಪಾಯಿ ಖರ್ಚು ಮಾಡುವುದರ ಬದಲು ಪಂಚಾಯಿತಿಗೊಂದು ಜೆರಾಕ್ಸ್ ಯಂತ್ರ ಖರೀದಿಸುವುದು. ದಾರಿ ದೀಪ ಇಲ್ಲದ ಕಡೆಗಳಲ್ಲಿ ದಾರಿ ದೀಪ ಅಳವಡಿಸಲು ಕ್ರಮ ಕೈಗೊಳ್ಳುವುದು. ವಿದ್ಯಾರ್ಥಿಗಳಿಗೆ 1ರಿಂದ 8ನೇ ತರಗತಿವರೆಗೆ ಮೊಟ್ಟೆ ನೀಡುತ್ತಿದ್ದು ಹತ್ತನೇ ತರಗತಿಯವರೆಗೆ ವಿಸ್ತರಿಸುವುದು. 8 ನೇ ತರಗತಿಯವರಿಗೆ ನೀಡುತ್ತಿದ್ದ ಸೈಕಲ್ ಈಗ ನೀಡುತ್ತಿಲ್ಲ ಸೈಕಲ್ ವಿತರಣೆ ಮಾಡಲು ಕ್ರಮ ಕೈಗೊಳ್ಳವುದು. ಪದ್ಮುಂಜ ಕಾಲೇಜು ಕೊಠಡಿ ನಿರ್ಮಾಣ ಮಾಡುವಾಗ ತೆಗೆದ ಮಣ್ಣು ಗಳನ್ನು ನೀರು ಹರಿಯುತ್ತಿರುವ ತೋಡಿಗೆ ಹಾಕಿದ್ದು ಮಳೆಯ ನೀರು ಸರಿಯಾಗಿ ಹರಿದು ಹೋಗದೆ ಪ್ರೌಢ ಶಾಲೆಯ ಆಟದ ಮೈದಾನದಲ್ಲಿ ನೀರು ತುಂಬಿ ಕೊಳಚೆಯಾಗಿ ವಿಧ್ಯಾರ್ಥಿಗಳಿಗೆ ನಡೆದು ಹೋಗಲು ಸಮಸ್ಯೆಯಾದ ಕಾರಣ ಕೂಡಲೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು. ಪದ್ಮುಂಜ ಕಲ್ಕುಡ ಮಾಡ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪಯೋಗಕ್ಕಿಲ್ಲದ ಹಲೇ ನೀರಿನ ಟ್ಯಾಂಕಿಗಳನ್ನು ತೆರವುಗೊಳಿಸುವುದು. ಪದ್ಮುಂಜ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆವರಣದೊಳಗೆ ಖಾಸಗಿ ವ್ಯಕ್ತಿಗಳು ಕೃಷಿ   ಮಾಡಿ ಹಣ ಸಂಪಾದನೆ ಮಾಡುದನ್ನು ತಡೆಗಟ್ಟುವುದು. ಹಾಲಿನ ಸೊಸೈಟಿ ಗೆ ಹೋಗುವ ರಸ್ತೆಯನ್ನು ಸರಿಪಡಿಸುವುದು. ಶಾಲಾ ಎಸ್ ಡಿ ಎಂ ಸಿ ಬಿಸಿಯೂಟದ ಖಾತೆಯಲ್ಲಿರುವ ಹಣ ವನ್ನು ಬಿ ಸಿ ಊಟದ ಸಾಮಗ್ರಿಗಳನ್ನು ಖರೀದಿಸಲು ಉಪಯೋಗಿಸಲು ಅವಕಾಶ ಕಲ್ಪಿಸುವುದು. ಬೀದಿ ನಾಯಿಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳುವುದು. ಪದ್ಮುಂಜ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಗ್ರಾಮಸ್ಥರು ಬೇಡಿಕೆಯನ್ನು ನೀಡಿದರು.

ಗ್ರಾಮ ಸಭೆಗೆ ಅತೀ ಕಡಿಮೆ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗಿಯಾಗಿರುವುದನ್ನು ಕಂಡ ಸ್ಥಳೀಯರು ಗ್ರಾಮ ಪಂಚಾಯಿತಿ ಸದಸ್ಯರು ಈ ಬಗ್ಗೆ ಮುತುವರ್ಜಿ ವಹಿಸಿಲ್ಲ ಎಂದು ಗ್ರಾಮಸ್ಥರು ನೇರವಾಗಿ ಪಂ ಸದಸ್ಯರನ್ನು ಆರೋಪಿಸಿದರು. ಇದಕ್ಕೆ   ಪಂ ಸದಸ್ಯರಾದ ಯಶೋದರ ಶೆಟ್ಟಿ ಹಾಗೂ ಸೀತಾರಾಮ ಮಡಿವಾಳರವರು ಗ್ರಾಮಸ್ಥರಿಗೆ ಪ್ರತ್ಯುತ್ತರವನ್ನು ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಲಜಾಕ್ಷಿ , ಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು,  ಅಂಗನವಾಡಿ ಆಶಾ ಸಂಜೀವಿನಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಅಧ್ಯಕ್ಷೀಯ ಬಾಷಣ ಮಾಡಿದ ಗಾಯತ್ರಿ ಯವರು ಮಾತನಾಡಿ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯನ್ನು ಪಂಚಾಯಿತಿ ವತಿಯಿಂದಲೂ ಶಾಸಕರ ವತಿಯಿಂದಲೂ ಹಂತ ಹಂತ ವಾಗಿ ನೆರವೇರಿಸಿಕೊಡಲಾಗುವುದು ಎಂದರು.
ಕಾರ್ಯದರ್ಶಿ ರಮೇಶ್ ಕೆ ಯವರು ಸ್ವಾಗತಿಸಿದರು.ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ರವರು ಧನ್ಯವಾದ ಸಲ್ಲಿಸಿದರು. ಸಿಬ್ಬಂದಿ ಉಮೇಶ್ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here