ಕಣಿಯೂರು ಘಟಕದ ಮಾಸಿಕ ಸಭೆ: ನೂತನ ಸ್ವಯಂ ಸೇವಕರ ಸೇರ್ಪಡೆ

0

ಕಣಿಯೂರು:  ಶೌರ್ಯ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಮಾಸಿಕ ಸಭೆ ಹಾಗೂ ನೂತನ ಯಂ ಸ್ವಸೇವಕರ ಸೇರ್ಪಡೆ ಸಭೆಯನ್ನು ಅ.14ರಂದು ಕೊರಿಂಜ ಸಭಾಭವನದಲ್ಲಿ ನಡೆಸಲಾಯಿತು.

ಈ ಸಭೆಗೆ ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ ಹಾಗೂ ಕಣಿಯೂರು ವಲಯದ ಮೇಲ್ವಿಚಾರಕರಾದ  ಪ್ರೇಮಾ,ಕಣಿಯೂರು ಘಟಕದ ಸಂಯೋಜಕಿ  ಚಂದ್ರಕಲಾ ಹಾಗೂ ಕಣಿಯೂರು ಘಟಕದ ಎಲ್ಲಾ ಸ್ವಯಂಸೇವಕರು ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹೊಸದಾಗಿ 13 ಸದಸ್ಯರ ಇಳಂತಿಲ ಘಟಕವನ್ನು ರಚನೆ ಮಾಡಲಾಯಿತು. ಈ ಘಟಕದ ಸಂಯೋಜಕಿಯಾಗಿ ಸೇವಾ ಪ್ರತಿನಿಧಿಯಾದ ಶ್ರೀಮತಿ ವಸಂತಿ ಅವರನ್ನು ಆಯ್ಕೆ ಮಾಡಲಾಯಿತು.

ಯೋಜನಾಧಿಕಾರಿಯವರು ವಿಪತ್ತು ನಿರ್ವಹಣೆ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಹಾಗೂ ಇದುವರೆಗೆ ನಡೆಸಿದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಹೊಸದಾಗಿ ಸೇರ್ಪಡೆಗೊಂಡ ಸೇವಕರಿಗೆ ವಿಪತ್ತು ನಿರ್ವಹಣೆ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಕಣಿಯೂರು ಘಟಕ ಪ್ರತಿನಿಧಿಯಾಗಿ ಗಿರೀಶ್ ಗೌಡ ಬಿ.ಕೆ ಮೈರೋಳ್ತಡ್ಕ ಇವರನ್ನು ಆಯ್ಕೆ ಮಾಡಲಾಯಿತು. ಸಂಯೋಜಕಿ ಚಂದ್ರಕಲಾ ರವರು ಸ್ವಾಗತಿಸಿ, ಸೇವಾ ಪ್ರತಿನಿಧಿ  ಸರೋಜಾ ರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here