ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯ ಪಿಲ್ಯ ಒಕ್ಕೂಟದ ತ್ರೈ ಮಾಸಿಕ ಸಭೆ

0

ಧರ್ಮಸ್ಥಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯ ಪಿಲ್ಯ ಒಕ್ಕೂಟದ ತ್ರೈ ಮಾಸಿಕ ಸಭೆಯು ಒಕ್ಕೂಟ ಅಧ್ಯಕ್ಷ ಕೃಷ್ಣರಾಜ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯ ಜವಾಬ್ದಾರಿಯನ್ನು ಮೂಕಾಂಬಿಕಾ ತಂಡದ ಸದಸ್ಯರು ವಹಿಸಿದ್ದರು.


ದೀಪ ಪ್ರಜ್ವಲನೆಯ ಮುಖಾಂತರ ಧ್ಯೇಯಗೀತೆ ಹಾಡುವುದರೊಂದಿಗೆ ಸಭೆಗೆ ಚಾಲನೆ ನೀಡಲಾಯಿತು. ತಂಡದ ಸದಸ್ಯೆ ಗುಲಾಬಿಯವರು ಎಲ್ಲರನ್ನು ಸ್ವಾಗತಿಸಿದರು ತಂಡದ ಅವಲೋಕನ ವರದಿಯನ್ನು ಸದಸ್ಯ  ಕೃಷ್ಣರಾಜ ಭಟ್ಟ ಅವರು ಮಂಡಿಸಿದರು.  ಒಕ್ಕೂಟದ ವರದಿಯನ್ನು ಕಾರ್ಯದರ್ಶಿ  ವಸಂತಿಯವರು ಮಂಡಿಸಿದರು.

ಒಕ್ಕೂಟ ಸಭೆಯಲ್ಲಿ ವಲಯ ಮೇಲ್ವಿಚಾರಕಿ  ಸುಮಂಗಲ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ  ನಾರಾಯಣ ಸಾಲಿಯಾನ್ ಹಾಗೂ ವಿ ಎಲ್ ಏ  ರಶ್ಮಿತಾ , ವಿಪತ್ತು ನಿರ್ವಹಣಾ ಸಂಯೋಜಕ ಶ್ರೀಕಾಂತ್ ,ಒಕ್ಕೂಟದ ಪದಾಧಿಕಾರಿಗಳು, ದಾಖಲಾತಿ ಸಮಿತಿಯವರು ಹಾಗೂ ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿ  ಹರಿಣಾಕ್ಷಿ ಭಾಗವಹಿಸಿದ್ದರು.

ವಿ ಎಲ್ ಎ ರಶ್ಮಿತಾ ರವರು ಸಿಎಸ್‌ಸಿ ಸೆಂಟರ್ ನಲ್ಲಿ ಸಿಗಬಹುದಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ  ಸುಮಂಗಲ ರವರು ಒಕ್ಕೂಟದ ಸದಸ್ಯರಿಗೆ ಅನೇಕ ಮಾಹಿತಿ ಮಾರ್ಗದರ್ಶನ ನೀಡಿದರು ಸೇವಾ ಪ್ರತಿನಿಧಿಯವರು ಸಭಾಧ್ಯಕ್ಷರು ಒಕ್ಕೂಟದಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದೆ ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಒಕ್ಕೂಟವನ್ನು ಉನ್ನತ ಸ್ಥಾನದಲ್ಲಿ ಉಳಿಸಿಕೊಂಡು ಹೋಗಬೇಕಾಗಿ ತಿಳಿಸಿದರು.

ಸಂಘದ ಸದಸ್ಯ  ಹರಿಣಾಕ್ಷಿ ಅವರು ವಂದನಾರ್ಪಣೆಗೈದರು. ಜನಗಣಮನದೊಂದಿಗೆ  ಸಭೆಯು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here