ಬಳಂಜ: ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ಚಂಡಿಕಾಯಾಗ

0

ಬಳಂಜ: ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನ ಸಿರಿಕ್ಷೇತ್ರ ಬದಿನಡೆ ಬಳಂಜ ಶ್ರೀ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ನಡೆಯಿತು.

ಬೆಳಿಗ್ಗೆ ಶ್ರೀ ಶಾಸ್ತಾರ ದೇವರಿಗೆ ಧೃಡಕಲಶಾಭಿಷೇಕ, ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ನವಕಲಶಾಭಿಷೇಕ,ಮಹಾಪೂಜೆ,ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ,ಗಂಧ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಹಾಗೂ ಸ್ವಾತಿ ಮ್ಯೂಸಿಕಲ್ ಕಾರ್ಯಾಣ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಜಯಸಾಲಿಯಾನ್,ಪ್ರಕಾಶ್ ವೇಣೂರು,ಮಂಜುಳಾ ಹಾಗೂ ಭಕ್ತರು ಉಪಸ್ಥಿತರಿದ್ದರು.

ಶಶಾಂಕ್ ಭಟ್, ಈಶ್ವರ ಭಟ್ ಹಾಗೂ ತಂಡದವರಿಂದ ವೈದಿಕ ವಿಧಿ ವಿಧಾನಗಳು ನಡೆಯಿತು.

LEAVE A REPLY

Please enter your comment!
Please enter your name here