ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ ಚಿದಾನಂದ ಇಡ್ಯರವರಿಗೆ ಉದ್ಯಮ ರತ್ನ ಪ್ರಶಸ್ತಿ

0

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ, ಪೂರ್ವ ವಲಯಾಧಿಕಾರಿ ಯುವ ಉದ್ಯಮಿ ಚಿದಾನಂದ ಇಡ್ಯರವರಿಗೆ ಬೆಳ್ಮಣ್ ನಲ್ಲಿ ನಡೆದ ಜೆಸಿಯ ವ್ಯವಹಾರ ಸಮ್ಮೇಳನದಲ್ಲಿ ಉದ್ಯಮ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

2015 ರಲ್ಲಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿದ್ದಾಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ ಜಿಲ್ಲೆಯಣ್ಣೊಳಗೊಂಡ ವಲಯ 15 ರಲ್ಲಿಯೇ ಅತ್ಯುತ್ತಮ ಘಟಕ ಅಧ್ಯಕ್ಷ ಪ್ರಶಸ್ತಿ ಪಡೆದು , ಐದು ಬಾರಿ ವಲಯ ಅಧಿಕಾರಿಯಾಗಿ, ಅತ್ಯುತ್ತಮ ವಲಯ ಅಧಿಕಾರಿ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಇದೀಗ ವಲಯದ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಟಿತ ಉದ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಲಯ ಅಧ್ಯಕ್ಷ ರೋಯನ್ ಕ್ರಾಸ್ತಾ ಪ್ರಶಸ್ತಿಯನ್ನು ಚಿದಾನಂದ ಇಡ್ಯರವರಿಗೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ,ಜೆಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಸಾದ್ ಬಿ.ಎಸ್,ಕಾರ್ಯದರ್ಶಿ ಶಂಕರ್ ರಾವ್, ಜೆಸಿ ಸಪ್ತಾಹ ಕಾರ್ಯಕ್ರಮ ಸಂಯೋಜಕ ಚಂದ್ರಹಾಸ ಬಳಂಜ, ಉಪಾಧ್ಯಕ್ಷೆ ಹೇಮಾವತಿ, ಜೇಸಿರೆಡ್ ಸಂಯೋಜಕಿ ಸುನೀತಾ ಬೈಜು, ಸದಸ್ಯ ಅನುದೀಪ್, ವಲಯದ ವ್ಯವಹಾರ ನಿರ್ದೇಶಕ ಸರ್ವಜ್ಞ ತಂತ್ರಿ ಆಡಳಿತ ವಿಭಾಗದ ನಿರ್ದೇಶಕ ಪುರುಷೋತ್ತಮ ಶೆಟ್ಟಿ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here