ಜನರ ಮೆಚ್ಚುಗೆಯನ್ನು ಪಡೆದ ಕೆಂದಾವರೆ ಕನ್ನಡ ಆಲ್ಬಮ್ ಸಾಂಗ್

0

ಬೆಳ್ತಂಗಡಿ: ಕನ್ನಡ, ತುಳು, ಕೊಂಕಣಿ ಸಿನೆಮಾಗಳನ್ನು ನಿರ್ದೇಶನ ಮಾಡಿದ ಕರಾವಳಿ ಮೂಲದ ಯುವ ನಿರ್ದೇಶಕ ಮೆಲ್ವಿನ್ ಎಲ್ಪೆಲ್ ಅವರು ನಿರ್ದೇಶನ ಮಾಡಿದ ‘ಕೆಂದಾವರೆ’ ಆಲ್ಬಮ್ ಸಾಂಗ್ ಅ.15ರಂದು ಯೂ ಟ್ಯೂಬ್
ಚಾನೆಲ್ ನಲ್ಲಿ ಬಿಡುಗಡೆ ಗೊಂಡಿದೆ.

ಜಸ್ಟ್ ರೋಲ್ ಫಿಲ್ಮ್ಸ್ ಸಂಸ್ಥೆ ತನ್ನದೇ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಕೆಂದಾವರೆ ಬೆಳ್ತಂಗಡಿ ಆಸುಪಾಸು ಸೇರಿದಂತೆ ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ, ಕೆಮ್ಮಣ್ಣುಗುಂಡಿ ಹಾಗೂ ಹಲವಾರು ಪ್ರವಾಸಿ ತಾಣಗಳು ಮತ್ತು ಶಿವಮೊಗ್ಗ ಜಿಲ್ಲೆಯ ರಮಣೀಯ ಪ್ರದೇಶಗಳ ಜತೆಗೆ ಮಂಗಳೂರಿನ ಹೆಸರಾಂತ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಆಲ್ಬಮ್ ಗೀತೆಯನ್ನು ಸುಂದರವಾಗಿ ಅಚ್ಚುಕಟ್ಟಾಗಿ ಚಿತ್ರಕತೆ ಮತ್ತು ನಿರ್ದೇಶನ ಮಾಡಿದವರು ಮೆಲ್ವಿನ್ ಎಲ್ಪೆಲ್ ಸಹಾಯಕ ನಿರ್ದೇಶನ ಮಾಡಿದವರು ನೋರ್ಬೆಟ್ ಡಿಸೋಜಾ ಖ್ಯಾತ ಸಂಗೀತ ನಿರ್ದೇಶಕ ರೋಷನ್ ಡಿಸೋಜಾ ಆಂಜೆಲೂರ್ ಸಂಗೀತ ನೀಡಿದ್ದಾರೆ.

ಗಾಯಕರಾಗಿ ಪ್ರಜೋತ್ ಡೇಸಾ ದ್ವನಿ ನೀಡಿದ್ದಾರೆ. ಕೆಕೆ ರಾಗು ರಾಟ್ಟಡಿ ಅವರ ಸಾಹಿತ್ಯವಿದಲ್ಲಿ ಜೋಸ್ಟಿನ್ ಡೇಸಾ ಅವರ ನಿರ್ಮಾಣದ ಈ ಆಲ್ಬಮ್ ಗೀತೆಯ ಸಂಪೂರ್ಣ ಚಿತ್ರೀಕರಣವನ್ನು ಜೈಸನ್ ಮಾಡಿದ್ದಾರೆ.
ಸಂಕಲನ ಕೆಲಸವನ್ನು ಸಚಿನ್ ಬಾಡ ಅವರು ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಕಲೆ ವೆಂಕಿ ತರೀಕೆರೆ ಮಾಡಿದ್ದು, ಈ ಚಿತ್ರಕ್ಕೆ ಕಲರಿಂಗ್ ನಿಖಿಲ್ ಕರಿಯಪ್ಪ ಮಾಡಿದ್ದಾರೆ. ವಿಜಿತ್ ಕೋಟಿಯನ್ ಮತ್ತು ಚೈತನ್ಯ ಮೈಸೂರ್ ಅಭಿನಯದ ‘ಕೆಂದಾವರೆ’ ಆಲ್ಬಮ್ ಸಾಂಗ್ ನೋಡುವ ಮನಸ್ಸುಗಳಿಗೆ ಪ್ರೀತಿಯ ಮುನ್ನುಡಿಯನ್ನು ಬರೆಯಬಲ್ಲದು ಎನ್ನುವ ನಿರ್ದೇಶಕ ಮೆಲ್ವಿನ್ ಅವರ ಮಾತು.

LEAVE A REPLY

Please enter your comment!
Please enter your name here