ವೇಣೂರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸ್ಥಳಾಂತರಗೊಂಡು ಉದ್ಘಾಟನೆ

0


ವೇಣೂರು: ಇಲ್ಲಿಯ ಜಿನ್‌ಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಶಾಖೆಯು ವೇಣೂರು ಮಹಾವೀರ ನಗರದ ಮಂಜುಶ್ರೀ ಕಾಂಪ್ಲೆಕ್ಸ್‌ಗೆ ಅ.17  ರಂದು ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು .


ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮಂಗಳೂರು ವಿಭಾಗದ ರೀಜನಲ್ ಮೆನೇಜರ್ ಜಗದೀಶ್ ರಾವ್ ಸ್ಥಳಾಂತರಗೊಂಡ ನೂತನ ಶಾಖೆಯನ್ನು ಉದ್ಘಾಟಿಸಿ, ಬ್ಯಾಂಕಿಂಗ್ ಸೇವೆಯಿಂದ ವಂಚಿತರಾಗಿರುವ ಗ್ರಾಮೀಣ ಭಾಗದ ಜನಸಾಮಾನ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆನ್ನುವುದು ನಮ್ಮ ಬ್ಯಾಂಕಿನ ಸಂಕಲ್ಪ ಮತ್ತು ಉದ್ದೇಶ ಆಗಿದೆ. ಜನಸಾಮಾನ್ಯರ ವಿಶ್ವಾಸಾರ್ಹ ಸರಕಾರಿ ಸಾಮ್ವದ ಬ್ಯಾಂಕ್ ಇದಾಗಿದೆ. ರಾಜ್ಯದ 10 ಜಿಲ್ಲೆಗಳಲ್ಲಿ 621 ಶಾಖೆಗಳನ್ನು ಹೊಂದಿದೆ. ವಾರ್ಷಿಕ ರೂ. 35000 ಕೋಟಿಯಷ್ಟು ಆರ್ಥಿಕ ವ್ಯವಹಾರ ಮಾಡುತ್ತಿದ್ದೇವೆ ಎಂದರು.

ಗ್ರಾಹಕರ ಪರವಾಗಿ ಪ್ರಭಾಕರ ಪ್ರಭು ಮತ್ತು ಹರೀಶ್ ಶೆಟ್ಟಿ ಎಲ್‌ಐಸಿ ಅನಿಸಿಕೆ ವ್ಯಕ್ತಪಡಿಸಿದರು. ಕಟ್ಟಡ ಮಾಲಕ ಉದಯ ಕಂಬಳಿ, ವೇಣೂರಿನ ಉದ್ಯಮಿಗಳು, ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು. ವೇಣೂರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮೆನೇಜರ್ ವಿಶ್ವೇಶ್ವರ ಎನ್.ಎಂ. ಸ್ವಾಗತಿಸಿ, ಸತ್ಕರಿಸಿದರು.

LEAVE A REPLY

Please enter your comment!
Please enter your name here