ಅಳಕೆಯಲ್ಲಿ ರಕ್ತದಾನ ಶಿಬಿರ ಹಾಗೂ ಮೌಲೀದ್ ಮಜ್ಲಿಸ್ ಕಾರ್ಯಕ್ರಮ

0

ಅಳಕೆ:  ರಕ್ತದಾನ ಶಿಬಿರ ಹಾಗೂ ಮೌಲೀದ್ ಮಜ್ಲಿಸ್ ಕಾರ್ಯಕ್ರಮವು ಎಸ್ ವೈ ಎಸ್ ಕುಪ್ಪೆಟ್ಟಿ ಸೆಂಟರ್ ವತಿಯಿಂದ ಅಳಕೆ ಮದರಸದಲ್ಲಿ ರಕ್ತದಾನ ಶಿಬಿರ ಹಾಗೂ ಮೌಲೀದ್ ಮಜ್ಲಿಸ್ ಕಾರ್ಯಕ್ರಮ ಅ16 ರಂದು ಸಮಿತಿಯ ಅಧ್ಯಕ್ಷರಾದ ಹೈದರ್ ಫೈಝಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರುಗಿತು.

ಅಳಕೆ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಅಮ್ಜದಿ ಉಸ್ತಾದರು ಮೌಲೀದ್ ಮಜ್ಲಿಸ್ ನಡೆಸಿಕೊಟ್ಟರು. ನಂತರ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ ವೈ ಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಕಾಸಿಂ ಪದ್ಮುಂಜ ರವರು ರಕ್ತದಾನ ಬೇಡಿಕೆ ಮತ್ತು ಅನಿವಾರ್ಯತೆ . ಈ ಬಗ್ಗೆ ಹಿರಿಯರು ತಮ್ಮ ತಮ್ಮ ಮಕ್ಕಳನ್ನು ಮೊಮ್ಮಕ್ಕಳನ್ನು ರಕ್ತದಾನ ನೀಡಲು ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿದರು.

ಅಳಕೆ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್,  ಜಂಯೀಯತುಲ್ ಉಲಮಾ ಕೇಂದ್ರ ಸಮಿತಿ ಸದಸ್ಯ ಪಿ ಕೆ ಮುಹಮ್ಮದ್ ಮದನಿ, ಎಸ್ ಎಂ ಎ ಅಧ್ಯಕ್ಷರಾದ ಉಸ್ಮಾನ್ ಹಾಜಿ, ಎಸ್ ವೈ ಎಸ್ ಸೆಂಟರ್ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕನ್ಯಾರಕೋಡಿ, ಎಸ್ ವೈ ಎಸ್ ಮೂರುಗೋಳಿ ಸೆಂಟರ್ ಅಧ್ಯಕ್ಷರಾದ ಹೈದರ್ ಹಾಜಿ, ಎಸ್ ವೈ ಎಸ್ ಅಳಕೆ ಬ್ರಾಂಚಿ ಅಧ್ಯಕ್ಷರಾದ ಮುಸ್ತಫಾ, ಎಸ್ ವೈ ಎಸ್ ಸಾಂತ್ವನ ಕಾರ್ಯದರ್ಶಿ ಇಮಾದುದ್ದೀನ್ ಕರಾಯ,ಎಸ್ ವೈ ಎಸ್ ಇಸಾಬ ಕಾರ್ಯದರ್ಶಿ ಯೂಸುಫ್ ಮುಸ್ಲಿಯಾರ್, ಎಸ್ ವೈ ಎಸ್ ಸೆಂಟರ್ ಕೋಶಾಧಿಕಾರಿ ಕಾಸಿಂ ನೆಕ್ಕಿಲು, ಎಸ್ ಎಸ್ ಎಫ್ ಅಳಕೆ ಶಾಖೆ ಅಧ್ಯಕ್ಷ ನಝೀರ್  ಹಾಗೂ ಅಳಕೆ ಮದರಸದ ಅಧ್ಯಾಪಕರುಗಳು, ಟೀಮ್ ಇಸಾಬ ಕಾರ್ಯಕರ್ತರು, ಎಸ್ ವೈ ಎಸ್ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ತಿತರಿದ್ದರು.

ಎಸ್ ವೈ ಎಸ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಟ್ಲಡ್ಕ ಸ್ವಾಗತಿಸಿದರು. ಎಸ್ ವೈ ಎಸ್ .ದ ಅವಾ ಕಾರ್ಯದರ್ಶಿ ಯೂಸುಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು. ಎಸ್ ವೈ ಎಸ್ ಸೆಂಟರ್ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಧನ್ಯವಾದ ಸಲ್ಲಿಸಿದರು.

 

LEAVE A REPLY

Please enter your comment!
Please enter your name here