ಉಜಿರೆ-ಪೆರಿಯಶಾಂತಿ ರಸ್ತೆಗೆ ರಾ.ಹೆದ್ದಾರಿ ಭಾಗ್ಯ

0

ಕೊಕ್ಕಡ: ರಾಷ್ಟ್ರೀಯ ಹೆದ್ದಾರಿ 73ರ ಉಜಿರೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಸಂಪರ್ಕಿಸುವ ಉಜಿರೆ-ಪೆರಿಯಶಾಂತಿ ನಡುವಿನ 30ಕಿಮೀ ವ್ಯಾಪ್ತಿಯ ಸಂಪರ್ಕ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಅಧಿಕೃತವಾಗಿ ಮೇಲ್ದರ್ಜೆಗೇರಿದೆ.

ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ರಸ್ತೆ ಹಸ್ತಾಂತರ ಪ್ರಕ್ರಿಯೆ ನೋಟಿಫಿಕೇಶನ್ ಕಾರ್ಯಗಳು ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 73ರ ಸ್ಟರ್ ರಸ್ತೆಯಾಗಿ ಉಜಿರೆ ಪೆರಿಯಶಾಂತಿ ರಸ್ತೆ ಕಾಣಿಸಿಕೊಂಡಿದೆ. ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಿಂದ ಅಧಿಕೃತವಾಗಿ ಮಾಹಿತಿ ಹೊರ ಬಿದ್ದಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿ  ಆಗುತ್ತದೆಯೇ ಇಲ್ಲವೆ ಎನ್ನುವ ಸಾರ್ವಜನಿಕರ ಚರ್ಚೆಗೆ ತೆರೆ ಎಳೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಟರ್ ಎಂಬ ಯೋಜನೆಯ ಮೂಲಕ ಈ ರಸ್ತೆಗೆ ಮುಂದಿನ ದಿನಗಳಲ್ಲಿ ಅನುದಾನಗಳು ದೊರಕಲಿದ್ದು ಭವಿಷ್ಯದಲ್ಲಿ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸುಸಜ್ಜಿತ ರಸ್ತೆಯ ಸೌಲಭ್ಯ ಲಭ್ಯವಾಗಲಿದೆ.

 

LEAVE A REPLY

Please enter your comment!
Please enter your name here