ವೇಣೂರು: ಬೈಕ್ ಸವಾರನಿಗೆ ಮಾರಕಾಸ್ತ್ರದಿಂದ ಹಲ್ಲೆ: ಇಬ್ಬರ ಸೆರೆ

0

ವೇಣೂರು: ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ತಂಡವೊಂದು ಬೈಕ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ಹಾವೇರಿಯ ಲಿಂಗಪ್ಪ ಗುರುಪಾದಯ್ಯ ಹೀರೇಮಠ್ ಹಾಗೂ ನಾಗರಾಜ ಬಸಪ್ಪ ಮಲಗುಂದ ಬಂಧಿತ ಆರೋಪಿಗಳು.

ಅಂಡಿಂಜೆ ಪಾಂಡಿಲ ನಿವಾಸಿ, ವೇಣೂರಿನಲ್ಲಿ ಶಾಮಿಯಾನ ವೃತ್ತಿ ನಡೆಸುತ್ತಿರುವ ರಾಜೇಂದ್ರ ಜೈನ್ ಹಲ್ಲೆಗೊಳಗಾದವರು. ಇವರು ಅ.11ರ ತಡರಾತ್ರಿ ಕೆಲಸ ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಕಿಲಾರ ಬಳಿ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಬೊಬ್ಬೆ ಕೇಳಿ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಭುಜದ ಭಾಗಕ್ಕೆ ಗಾಯಗೊಂಡಿದ್ದ ರಾಜೇಂದ್ರ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಪೊಲೀಸರು ಸಿಸಿಟಿವಿ ಫೂಟೇಜ್ ಹಾಗೂ ಕಾರಿನ ನಂಬರ್ ಆಧರಿಸಿ ಆರೋಪಿಗಳನ್ನು ಹಾವೇರಿಯಿಂದ ಬಂದಿಸಿದ್ದಾರೆ. ಆರೋಪಿಗಳು ಯಾವ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆಂಬ ಬಗ್ಗೆ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ರಾಜೇಂದ್ರ ಅವರಿಗೆ ಕೆಲ ತಿಂಗಳುಗಳ ಹಿಂದೆ ಹಾವೇರಿ ಮೂಲದ ಯುವತಿಯೊಂದಿಗೆ ವಿವಾಹವಾಗಿತ್ತು.

LEAVE A REPLY

Please enter your comment!
Please enter your name here