ಧರ್ಮಸ್ಥಳ ಗ್ರಾಮ ಕಿಶೋರಿ ಸಭೆ

0

ಧರ್ಮಸ್ಥಳ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಧರ್ಮಸ್ಥಳ ಗ್ರಾಮ ಕಿಶೋರಿ ಸಭೆಯನ್ನು ನಡೆಸಲಾಯಿತು .  ಸಭೆಯ ಮುಖ್ಯ ಅತಿಥಿಗಳಾಗಿ ಡಾ. ಮೇಘನಾ ಆಗಮಿಸಿ ಆರೋಗ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಂದರ್ಶಕಿ  ಸೀತಮ್ಮ, ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವರು ಹಿರಿಯರೂ ಕಲಾಪೋಷಕರು ಕಲಾ ಆರಾದಕರು ಆದ ಬಿ, ಭುಜಬಲಿ,ಧರ್ಮಸ್ಥಳ ಎಂಟು ವರ್ಷದಿಂದ 18 ವರ್ಷದ ವರೆಗಿನ ಹೆಣ್ಣು ಮಕ್ಕಳಿಗೆ ಆರೋಗ್ಯ ಹಾಗೂ ಆಹಾರದ ಕುರಿತು ಹಿತನುಡಿಗಳನ್ನಾಡಿದರು. ಶ್ರೀ ಮಂಜುನಾಥ ಸ್ವಾಮಿ ಅನುಧಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ ಮುಖ್ಯೋಪಧ್ಯಾಯರಾದ  ಧರ್ಣಪ್ಪರವರು ಮಾತನಾಡಿ ಉತ್ತಮವಾದ ಸಲಹೆಗಳನ್ನು ನೀಡಿದರು.

ಗ್ರಾಮ ಪಂಚಾಯತ್ ಸದಸ್ಯೆ ಶರ್ಮಿಳಾ ಜೈನ್ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪೌಷ್ಟಿಕ ತೋಟ ಹಾಗೂ ಇನ್ನಿತರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಾಕ್ಟರ್, ಮೇಘನಾರವರನ್ನು ಅಂಗನವಾಡಿ ಬಾಲವಿಕಾಸ ಸಮಿತಿಯಿಂದ ಸನ್ಮಾನಿಸಲಾಯಿತು. ಆಶಾ ಕಾರ್ಯಕರ್ತೆಯರಾದ ಧನಲಕ್ಷ್ಮಿ ಹಾಗೂ ಸುಜಾತಾ ಅಂಗನವಾಡಿ ಕಾರ್ಯಕರ್ತೆ  ಬಿಂದು, ಸಹಾಯಕಿ  ಭಾಗ್ಯ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here