ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಸಂಘಟನಾ ಮೇಳ

0

ಬೆಳ್ತಂಗಡಿ: ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ ದ್ವಿದಶಕ ಪೂರ್ತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಲಾದ ಹಿಂದೂ ಸಂಘಟನಾ ಮೇಳವು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿನಾಕಿ ಸಭಾಭವನದಲ್ಲಿ ಅಕ್ಟೋಬರ್ 15 ರಂದು ಜರುಗಿತು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ  ಚಂದ್ರ ಮೊಗೇರ ಮಾತನಾಡಿ ಹಿಂದೂಗಳ ಅನೇಕ ಸಮಸ್ಯೆಗಳಿಗೆ ಒಂದೇ ಪರಿಹಾರ ಹಿಂದೂ ರಾಷ್ಟ್ರ ಎಂದು ಹೇಳಿದರು.
ಪುತ್ತೂರಿನ ಅಭಿನವ ಭಾರತ ಮಿತ್ರ ಮಂಡಳಿಯ ನವೀನ್ ಕುಲಾಲ್ ಇವರು ಮಾತನಾಡಿ  ಸಾರ್ವಜನಿಕ ಉತ್ಸವದ ಮೆರವಣಿಗೆಯಲ್ಲಿ ನಡೆಯುವ ಅನಾಚಾರಗಳನ್ನು ಸಮಿತಿಯು ಅನೇಕ ವರ್ಷಗಳಿಂದ ಕಾನೂನು ಮಾರ್ಗವಾಗಿ ನಿಲ್ಲಿಸಲು ಪ್ರಯತ್ನಿಸುತ್ತಿದೆ ನಾವು ಕೂಡ ಅದರಲ್ಲಿ ಕೈಜೋಡಿಸಬೇಕು, ಅದೇ ರೀತಿ ಹಲಾಲ್ ಜಿಹಾದ್ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ, ಇದರ ಗಂಭೀರತೆಯನ್ನು ಹಿಂದೂ ಜನಜಾಗೃತಿ ಸಮಿತಿಯು ನಮ್ಮ ಗಮನಕ್ಕೆ ತಂದು ಕೊಟ್ಟಿದೆ. ಅದರಿಂದಾಗಿ ಪ್ರತಿಯೊಂದು ಹಿಂದೂಗಳು ಹಲಾಲ್ ಮಾರ್ಕ್ ಇರುವ ವಸ್ತುಗಳನ್ನು ಖರೀದಿಸಬಾರದು ಮತ್ತು ಅಂತಹ ವಸ್ತುಗಳು ಗಮನಕ್ಕೆ ಬಂದರೆ ಕೂಡಲೇ ಹಿಂದುಗಳ ಅಂಗಡಿಯವರಿಗೂ ತಿಳಿಸಿ ಪ್ರತಿಯೊಂದು ಹಿಂದುಗಳ ಗಮನಕ್ಕೆ ತಂದುಕೊಡಬೇಕೆಂದು ತಿಳಿಸಿದರು.

ಮೆಖಾಲೆ ಶಿಕ್ಷಣ ಪದ್ದತಿಯಿಂದಾಗಿಯೇ ಹಿಂದೂಗಳು ಧರ್ಮದ ಮೇಲಿನ ಅಭಿಮಾನ ಕಳೆದುಕೊಂಡಿದ್ದಾರೆ, ಹಿಂದೂ ಜನಜಾಗೃತಿ ಸಮಿತಿಯು ಧರ್ಮಶಿಕ್ಷಣದ ಮೂಲಕ ಜಾಗೃತಿ ಮಾಡುವುದರಿಂದ ಭಾರತವು ಖಂಡಿತವಾಗಿಯೂ ಹಿಂದೂ ರಾಷ್ಟ್ರವಾಗುವುದು ಎಂದು ತಿಳಿಸಿದರು.

ಸನಾತನ ಸಂಸ್ಥೆಯ ಸಾಧಕಿ ಸೌ. ಹೇಮಲತಾ ಕಲ್ಲಾಜೆ ಯವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here