ಬೆಳಾಲು: ಲಾರಿ-ಬೈಕ್ ಮುಖಾಮುಖಿ ಡಿಕ್ಕಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿ

0

 

ಬೆಳಾಲು ಕೂಡಲ ಕೆರೆ ಎಂಬಲ್ಲಿ ಅ.18ರಂದು ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಸೋಮಂದಡ್ಕದಿಂದ ಬೆಳಾಲು ಕಡೆಗೆ ಬರುತ್ತಿದ್ದ ಲಾರಿ ಹಾಗೂ ಬೆಳಾಲಿನಿಂದ ಉಜಿರೆ ಗೆ ಬರುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ.

ಬೈಕ್ ಸವಾರ ಸೃಜನ್(19) ಬೆಳಾಲು ನಿವಾಸಿಯಾಗಿದ್ದು ಉಜಿರೆ ಎಸ್ ಡಿಎಂ ಡಿಗ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇದೀಗ  ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here