ಹಿಂದೂ ಧರ್ಮದ ಪ್ರಚಾರ ಹಾಗೂ ರಕ್ಷಣೆಯ ಕಾರ್ಯ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಸರಕಾರದಿಂದ ಅಂಗರಕ್ಷಕರ ವ್ಯವಸ್ಥೆ

0


ಬೆಳ್ತಂಗಡಿ: ಹಿಂದೂ ಧರ್ಮದ ಪ್ರಚಾರ ಹಾಗೂ ರಕ್ಷಣೆಯ ಕೆಲಸಕ್ಕಾಗಿ ದೇಶದಾದ್ಯಂತ ಸಂಚರಿಸುತ್ತಿರುವ ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಭದ್ರತೆಯ ದೃಷ್ಟಿಯಿಂದ ಸರಕಾರ ಅಂಗರಕ್ಷಕರ ವ್ಯವಸ್ಥೆಯನ್ನು ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯಲ್ಲಿ ಮಠಗಳು, ಶಿಕ್ಷಣ ಸಂಸ್ಥೆಗಳನ್ನು ಮಾಡಿ ಉಚಿತ ಶಿಕ್ಷಣ, ಅನ್ನ ದಾಸೋಹ ನೀಡುತ್ತಿರುವ ಸ್ವಾಮೀಜಿಯವರು ಉತ್ತರ ಕನ್ನಡ ಜಿಲ್ಲೆಯ ಅತಿ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶವಾಗಿರುವಂತಹ ಭಟ್ಕಳದಲ್ಲಿ ಕೂಡ ಶಾಖಾಮಠಗಳನ್ನು ನಿರ್ಮಾಣ ಮಾಡಿ ಹಿಂದೂ ಧರ್ಮದ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ಕೂಡ ಶಾಖಾ ಮಠ ನಿರ್ಮಾಣ ಮಾಡಿ ಇಡೀ ದೇಶದಲ್ಲಿ ಧರ್ಮ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ.

ಸ್ವಾಮೀಜಿಯವರು ಈ ಎಲ್ಲಾ ಧರ್ಮ ಕಾರ್ಯಗಳಿಗಾಗಿ ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ಇದನ್ನು ಮನಗಂಡು ಸರಕಾರ ಅವರ ಭದ್ರತೆಯ ದೃಷ್ಟಿಯಿಂದ ಸರಕಾರದ ವತಿಯಿಂದ ಅಂಗರಕ್ಷಕರ ವ್ಯವಸ್ಥೆಯನ್ನು ಮಾಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here