ಶಿಶಿಲ: ಅಕ್ರಮ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ: 9ಮಂದಿ ಬಂಧನ

0

 

 

 

 

 

 

ಶಿಶಿಲ:  ಶಿಶಿಲ ಗ್ರಾಮದ ಕಂಚಿನಡ್ಕ  ಸರಕಾರಿ ಗುಡ್ಡ ಪ್ರದೇಶದಲ್ಲಿ ನೆಲಕ್ಕೆ ನೀಲಿ ಟರ್ಪಾಲು ಹಾಸಿ ಅದರ ಮೇಲೆ 9 ಜನರು ಸುತ್ತುವರಿದು ಕುಳಿತು ಇಸ್ಪೀಟ್ ಆಡುತ್ತಿದ್ದ ಸ್ಥಳಕ್ಕೆ ಪೋಲಿಸರು ದಾಳಿ ನಡೆಸಿ 9ಜನ ಆರೋಪಿಗಳನ್ನು ಅ.18ರಂದು ಬಂಧಿಸಿದ್ದಾರೆ.

ಎಲೆಗಳನ್ನು ಉಪಯೋಗಿಸಿ ಅಂದರ್‌ಬಾಹರ್ ಎಂದು ಹೇಳುತ್ತಾ ಇಸ್ಪೀಟ್ ಎಲೆಗಳನ್ನು ಹಾಕುತ್ತಾ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಪೀಟ್ ಆಟವಾಡುತ್ತಿದ್ದ ಆರೋಪಿಗಳನ್ನು ಹಿಡಿದುಕೊಂಡು ವಿಚಾರಿಸಿ ಟಾರ್ಪಲ್ ನಲ್ಲಿ ಹಾಕಿದ್ದ 52 ವಿವಿಧ ಜಾತಿಯ ಇಸ್ಪೀಟ್ ಎಲೆಗಳನ್ನು ಹಾಗೂ ಹಣವನ್ನು ಪಣವಾಗಿಟ್ಟ ನಗದು ರೂ 11,370/- ಹಾಗೂ ದ್ವಿಚಕ್ರ ವಾಹನ ನಂಬ್ರ ಕೆಎ 21 ಇಸಿ 0671 ಮತ್ತು ಮಾರುತಿ ಓಮಿನಿ ಕಾರು ನಂಬ್ರ ಕೆಎ 21 ಬಿ 9944 ನ್ನು ಹಾಗೂ ನಗದು , ಸೊತ್ತುಗಳ ಅಂದಾಜು ಮೌಲ್ಯ ರೂ.1,01,370 ವಶಪಡಿಸಿಕೊಂಡಿದ್ದಾರೆ.

ಆಟದಲ್ಲಿ ನಿರತರಾಗಿದ್ದ  ಶಿಶಿಲ ಗ್ರಾಮದ ಓಟ್ಲ ಮನೆಯ  ವೆಂಕಪ್ಪ ಪೂಜಾರಿ(55) . ಶಿಶಿಲ ಗ್ರಾಮದ ಪರಾರಿ ಬಾಳ ಹಿತ್ತಿಲು ಮನೆಯ ವಸಂತ ಗೌಡ(48), ಶಿಶಿಲ ಗ್ರಾಮದ ನಾಗನಡ್ಕ ಮನೆಯ  ಕೃಷ್ಣಪ್ಪ ಗೌಡ(45), ಶಿಬಾಜೆ ಗ್ರಾಮದ ಐಂಗುಡ ಮನೆಯ ಶಿವರಾಮ ಗೌಡ(53), ಶಿಶಿಲ ಗ್ರಾಮದ ಅಂಬೆತ್ತಡ್ಕ ಮನೆಯ ಸದಾಶಿವ(38) . ಕಡಬ ತಾಲೂಕಿನ ಕಡಬ ಗ್ರಾಮದ ಮುಳಿಮಜಲು  ಪೊಡಿಯಾ(50) . ಶಿಶಿಲ ಗ್ರಾಮದ ಅಂಬೆತ್ತಡ್ಕ ಮನೆಯ ಹೊನ್ನಪ್ಪ (47) , ಶಿಶಿಲ ಗ್ರಾಮದ ಮಚ್ಚಿರಡ್ಕ ಮನೆಯ ಸುರೇಶ್(33) . ಕಡಬ ತಾಲೂಕಿನ ಮುಳಿಮಜಲು ಮನೆಯ  ಕೇಶವ(42) ಇವರನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here