ಬೆಳ್ತಂಗಡಿ: ಅಮೃತ ಸಂಜೀವಿನಿ ಸಂಘಟನೆಯಿಂದ ಅಶಕ್ತ ಕುಟುಂಬಗಳಿಗೆ ರೂ 2.27 ಲಕ್ಷ ಹಸ್ತಾಂತರ

0

ಬೆಳ್ತಂಗಡಿ: ಅಮೃತ ಸಂಜೀವಿನಿ ಮಂಗಳೂರು ಇದರ ಅಂಗಸಂಸ್ಥೆಯಾದ ಸಂಜೀವಿನಿ ಬೆಳ್ತಂಗಡಿ ಇದರ 5ನೇ ವರ್ಷದ ಸೇವಾ ಸಂಭ್ರಮದ ಪ್ರಯುಕ್ತ 6 ಅಶಕ್ತ ಕುಟುಂಬಗಳಿಗೆ ತುರ್ತು ಯೋಜನೆಯಡಿಯಲ್ಲಿ 60 ಸಾವಿರ ಹಾಗೂ ಅಮೃತಸಂಜೀವಿನಿ ಇದರ ಮಾಸಿಕದ ಯೋಜನೆಯನ್ನು 4 ಅಶಕ್ತ ಕುಟುಂಬಗಳಿಗೆ 1 ಲಕ್ಷದ 67 ಸಾವಿರ ಸಹಾಯಧನವನ್ನು, ಒಟ್ಟು 10 ಬಡ ಕುಟುಂಬಗಳಿಗೆ 2 ಲಕ್ಷದ 27 ಸಾವಿರಗಳನ್ನು ಗಣ್ಯರ ಸಮ್ಮುಖದಲ್ಲಿ ಸಹಾಯಹಸ್ತ ಧನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಸಂಸ್ಥಾಪಕರು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪುಷ್ಪಾ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಉಜಿರೆ, ದಾಸಪ್ಪ ಗೌಡ ಪ್ರಗತಿಪರ ಕೃಷಿಕರು ಕೋಡಿಯಡ್ಕ, ಶ್ರೀಕಾಂತ್ ಭಟ್ ಕನ್ಯಾನ ಪ್ರಮುಖರು ಅಮೃತಸಂಜೀವಿನಿ, ಪ್ರಶಾಂತ್ ರಾಮಗಿರಿ ಪ್ರಮುಖರು ಸಂಜೀವಿನಿ ಬೆಳ್ತಂಗಡಿ, ಮನೋಜ್ ಕುಂಜರ್ಪ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂಜೀವಿನಿ ಬೆಳ್ತಂಗಡಿ ತಂಡದ ಕುಣಿತ ಭಜನಾ ತಂಡವನ್ನು ಉದ್ಘಾಟನೆ ಮಾಡಲಾಯಿತು.

ಲೋಕೇಶ್ ಶಿಬಾಜೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಅಮೃತಸಂಜೀವಿನಿ ಮಂಗಳೂರು ಮತ್ತು ಸಂಜೀವಿನಿ ಬೆಳ್ತಂಗಡಿಯ ಸರ್ವ ಸಂಜೀವಿನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here