ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮೈಟ್ ಕಾಲೇಜಿನಿಂದ ಸ್ವಚ್ಚ ಭಾರತ್ ಅಭಿಯಾನ

0

ಉಜಿರೆ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮೈಟ್ ಕಾಲೇಜು ಸಹಯೋಗದೊಂದಿಗೆ ಅ‌. 07ರಿಂದ ಅ.12 ರ ತನಕ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಬೆಳ್ತಂಗಡಿ, ಉಜಿರೆ, ಬಳಂಜ ಪ್ರದೇಶದಲ್ಲಿ ನಡೆಯಿತು.

ಜೆಸಿ ಭವನದಲ್ಲಿ ಸ್ವಚ್ಚಾತಾ ಅಭಿಯಾನಕ್ಕೆ ಚಾಲನೆ ನೀಡಿ ಬೆಳ್ತಂಗಡಿ ನಗರ ಸ್ವಚ್ಛತೆ, ಲಾಯಿಲ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಲಾಯಿಲ ಪರಿಸರ ಸ್ವಚ್ಛತೆ, ಬಳಂಜ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಬಳಂಜ ಪರಿಸರ ಸ್ವಚ್ಛತೆ, ಬೆಳ್ತಂಗಡಿ ನದಿ ಸ್ವಚ್ಚತೆ ಹಾಗೂ ಉಜಿರೆ ಪಂಚಾಯತ್ ಸಹಕಾರದೊಂದಿಗೆ ಉಜಿರೆ ನಗರದಲ್ಲಿ ಸ್ವಚ್ಛತೆ ಮಾಡುವ ಮುಖೇನ ಅಭಿಯಾನ ಸಂಪನ್ನಗೊಂಡಿತು.   ಕಾರ್ಯಕ್ರಮದ ಸಮಾರೋಪ ಸಮಾರಂಭ ಉಜಿರೆ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.‌

ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾವತಿ ಶೆಟ್ಟಿ, ಉಪಾಧ್ಯಕ್ಷರಾದ ರವಿ ಕುಮಾರ್ ಬರಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಉಜಿರೆ ವರ್ತಕರ ಸಂಘದ ಅಧ್ಯಕ್ಷರಾದ ಅರವಿಂದ್ ಕಾರಂತ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್ ರಮ್ಯಾ, ಮೈಟ್ ಕಾಲೇಜಿನ ಪ್ರೋಫೆಸರ್ ಗಣೇಶ್, ಪಂಚಾಯತ್ ಕಾರ್ಯದರ್ಶಿ ಜಯಂತ್ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಕಾರ್ಯಕ್ರಮದಲ್ಲಿ ಚಂದ್ರಹಾಸ ಬಳಂಜ, ಆಶಾಲತಾ ಪ್ರಶಾಂತ್, ರಕ್ಷಿತ್ ಅಂಡಿಂಜೆ, ಪೂರ್ವಾಧ್ಯಕ್ಷರಾದ ಚಿದಾನಂದ ಇಡ್ಯಾ, ನಾರಾಯಣ ಶೆಟ್ಟಿ,ಸಂತೋಷ್ ಪಿ ಕೋಟ್ಯಾನ್, ಉಪಾಧ್ಯಕ್ಷರಾದ ರಂಜಿತ್ ಹೆಚ್.ಡಿ ಭಾಗವಹಿಸಿದರು.

LEAVE A REPLY

Please enter your comment!
Please enter your name here