ಬೆಳ್ತಂಗಡಿ: ಕೋಟಿ ಚೆನ್ನಯ ಸೇವಾ ಯೋಜನೆಯಿಂದ ತಣ್ಣೀರುಪಂಥ ಧನಂಜಯ ಪೂಜಾರಿಯವರ ಕುಟುಂಬಕ್ಕೆ ಅರ್ಥಿಕ ನೆರವು

0

 

 

ಬೆಳ್ತಂಗಡಿ: ತಣ್ಣೀರುಪಂಥ ಗ್ರಾಮದ ಮುಂದಿಲ ಮನೆ ಧನಂಜಯ ಪೂಜಾರಿಯವರ ಪತ್ನಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದು,  ಅವರ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಬೆಳ್ತಂಗಡಿ ಕೋಟಿ ಚೆನ್ನಯ ಸೇವಾ ಯೋಜನೆ ತಂಡ ಅವರಿಗೆ ಆರ್ಥಿಕವಾಗಿ ಶಕ್ತಿ ನೀಡುವ ಕೆಲಸವನ್ನು ಅ. 18 ರಂದು ಮಾಡಿದರು.

ಕಳೆದ ಕೆಲ ತಿಂಗಳ ಹಿಂದೆ ರೂಪುಗೊಂಡ ಕೋಟಿ ಚೆನ್ನಯ ಸೇವಾ ಯೋಜನಾ ತಂಡವು ತಾಲೂಕಿನ ಹಲವು ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮುಖೇನಾ ಸಮಾಜದಲ್ಲಿ ಗುರುತಿಸಿಕೊಂಡಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ಸುಂದರ ಪೂಜಾರಿ, ಭಗೀರಥ ಜಿ, ಚರಣ್ ಕುಮಾರ್, ಚಿದಾನಂದ ಇಡ್ಯ, ಜಯವಿಕ್ರಮ್ ಕಲ್ಲಾಪು, ಜಯಾನಂದ ಕಲ್ಲಾಪು, ಗುಣಕರ್ ಅಗ್ನಾಡಿ, ತಣ್ಣೀರುಪಂಥ ಬಿಲ್ಲವ ಸಂಘದ ಅಧ್ಯಕ್ಷ ಮಹೇಶ್, ರಾಘವ, ಜಯಂತಿ ಪಾಲೇದು, ಯೋಗೀಶ್, ಕೇಶವತಿ, ಚೇತನ್, ಯೋಗೀಶ್ ಸ್ವಾಯತ್, ವಿಶ್ವನಾಥ್, ಗೋಪಾಲ ಮಚ್ಚಿನ, ರಜನಿನಾಥ್ ಮುಂದಿಲ, ನಾರಾಯಣ ಮಚ್ಚಿನ ಚಂದ್ರಶೇಖರ್ ಮಚ್ಚಿನ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here