ಕಳಿಯ ಗ್ರಾಮ ಪಂಚಾಯತ್ 2022-23 ನೇ ಸಾಲಿನ ಡಿಜಿಟಲ್ ಸಾಮಾನ್ಯ ಗ್ರಾಮ ಸಭೆ

0

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ 2022-23 ನೇ ಸಾಲಿನ ದ್ವಿತೀಯ ಹಂತದ ಡಿಜಿಟಲ್ ಸಾಮಾನ್ಯ ಗ್ರಾಮದ ಸಭೆ ಆ.19 ರಂದು ಕಳಿಯ ಸಹಕಾರಿ ಸಂಘದ ಸಭಾ ಭವನದಲ್ಲಿ ಜರುಗಿತು.

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು.

ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ವಿದ್ಯಾ ಪಿ.ಡಿ.ವಲಯ ಅರಣ್ಯಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ‌ ಸಭೆಯನ್ನು ನಡೆಸಿ ಕೊಟ್ಟರು. ಪ್ರಸ್ತುತ 2022-23 ನೇ ಸಾಲಿನ ವರದಿಯನ್ನು ಪಂಚಾಯತು ಕಾರ್ಯದರ್ಶಿ ಕುಂಞ್ಞ ಸಭೆಯಲ್ಲಿ ಮಂಡಿಸಿದರು. ಜಮ – ಖರ್ಚು ವೆಚ್ಚವನ್ನು ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸಭೆಗೆ ತಿಳಿಸಿದರು. ‌‌‌

ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಹೆಚ್ಚಿನ ಅಧಿಕಾರಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದು, ಗ್ರಾಮಸ್ಥರು ಸವಲತ್ತುಗಳನ್ನು ಪಡೆಯುವ ಬಗ್ಗೆ ಮಾಹಿತಿಯನ್ನು ನೀಡಿದರು. ಪಂಚಾಯತು ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಸದಸ್ಯರಾದ ದಿವಾಕರ ಎಮ್,ಸುಧಾಕರ ಮಜಲು,ವಿಜಯ ಕುಮಾರ್ ಕೆ,ಹರೀಶ್ ಕುಮಾರ್ ಬಿ,ಯಶೋಧರ ಶೆಟ್ಟಿ ಕೆ, ಅಬ್ದುಲ್ ಕರೀಂ ಕೆ.ಎಮ್,ಮೋಹಿನಿ ಬಿ.ಗೌಡ,ಮರೀಟಾ ಪಿಂಟೊ,ಪುಷ್ಪ ,ಇಂದಿರಾ ಶೆಟ್ಟಿ ಮತ್ತು ಶಕುಂತಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು,ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಂಚಾಯತು ಸಿಬ್ಬಂದಿಗಳು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತುಕಾರಾಮ ಪೂಜಾರಿ ಎಮ್, ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು,ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ,ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ, ನಾಳ ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ಕೇಲ್ದಡ್ಕ,ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ನಾಳ,ನಾಳ ಹಾಲು ಉತ್ಪಾದಕರ ಸಂಘದ ಸದಸ್ಯ ಸೋಮಪ್ಪ ಗೌಡ ಕೆ,ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್, ವಿವಿಧ ಸಂಘ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚೆ:
1) ರಸ್ತೆಯ ಬದಿಯಲ್ಲಿ,ಮನೆ,ಇತರ ಕಟ್ಟಡದ ಪಕ್ಕದಲ್ಲಿರುವ ಮರವನ್ನು ತೆರವು ಮಾಡಲು ಅರಣ್ಯ ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳುವುದಿಲ್ಲ.ಸಾರ್ವಜನಿಕರ ಮನವಿಗೆ ಸ್ಪಂದಿಸುವ ಕೆಲಸ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
2)ಕಳಿಯ ಗ್ರಾಮದ ಓರ್ವ ಆಶಾ ಕಾರ್ಯಕರ್ತೆ ಮನೆ ಭೇಟಿ ನೀಡುವುದಿಲ್ಲ. ಸ್ಥಳೀಯರು ಅಕ್ಷೇಪ ವ್ಯಕ್ತಪಡಿಸಿದರು.
3)ಕಳಿಯ ಗ್ರಾಮದ ಪರಿಶಿಷ್ಟ ಜಾತಿಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಂಬಂದ ಪಟ್ಟ ಇಲಾಖೆಯ ವತಿಯಿಂದ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದರು.
4)ಕಳಿಯ ಗ್ರಾಮದ ಪಂಚಾಯತ್ ಆಸ್ತಿಯನ್ನು ಬೇಲಿ ಹಾಕುವಂತೆ ಗ್ರಾಮಸ್ಥರ ಸಲಹೆ ನೀಡಿದರು.
ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ,ಧನ್ಯವಾದವಿತ್ತರು.
 

LEAVE A REPLY

Please enter your comment!
Please enter your name here