ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ, ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ ಮಟ್ಟದ ಮಾಸಿಕ ಸಭೆ: ಗ್ಯಾರೇಜ್ ಮಾಲಕರ ಮತ್ತು ಕೆಲಸಗಾರರ ಮಹಾ ಸಮ್ಮೇಳನ ಸಿದ್ದತೆ ಬಗ್ಗೆ ಪೂರ್ವ ಬಾವಿ ಸಭೆ

0

ಉಜಿರೆ: ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ  ಮತ್ತು ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ ಮಟ್ಟದ ಮಾಸಿಕ ಸಭೆ ಹಾಗೂ ಗ್ಯಾರೇಜ್ ಮಾಲಕರ ಮತ್ತು ಕೆಲಸಗಾರರ ಮಹಾ ಸಮ್ಮೇಳನ ಸಿದ್ದತೆ ಬಗ್ಗೆ ಪೂರ್ವ ಬಾವಿ ಸಭೆ
ಅ.16 ರಂದು ಉಜಿರೆಯಲ್ಲಿ ಜರುಗಿತು.

ಈ ಸಭೆಯಲ್ಲಿ ಕೋರ್ ಕಮಿಟಿ ಚೇರ್ಮನ್  ಪುಂಡಲಿಕ ಸುವರ್ಣ ಸಮ್ಮೇಳನ ದ ಉದ್ದೇಶ ತಿಳಿಸಿದರು.

ಜಿಲ್ಲಾ ಅಧ್ಯಕ್ಷರಾದ ದಿನೇಶ್ , ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಕಮೀಲ , ದಿವಾಕರ್ ,ರಾಜಗೋಪಾಲ್ , ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಪೂವಪ್ಪ ಗೌಡ ,ಬಾಲಕೃಷ್ಣ ಶೆಟ್ಟಿ , ಜಗದೀಶ ಕುಲಾಲ್ ,ಉಮೇಶ್ ಶೆಟ್ಟಿ ,ಪುರಂದರ ಹೆಗ್ಡೆ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘ ದ ನಿರ್ದೇಶಕ ಆರ್ ಜೇ ಸೋನ್ಸ್, ಬಾಬು ರಾಜ್, ಅಂತೋನಿ , ಪ್ರವೀಣ ಉಜಿರೆ, ಮಧುಕರ ರಾಜೇಶ್ ಉಪಸ್ಥಿತರಿದ್ದರು.

ಈ ಸಂದರ್ಭಲ್ಲಿ ಬೆಂಕಿ ಅವಘಡಕ್ಕೆ ಒಳಗಾದ ಆನಾರ್ ಕಾರ್ ಕ್ಯಾರ್ ಇವರಿಗೆ ಬೆಳ್ತಂಗಡಿ ವಲಯದಿಂದ ಸಾಂತ್ವಾನ ನಿಧಿ ನೀಡಲಾಯಿತು.

ಅನಾರೋಗ್ಯ ದಿಂದ ನಿಧನ ಹೊಂದಿದ  ಸಂಘ ಸದಸ್ಯ ಶೇಖರ ಮಡಿವಾಳ ಇವರ ಕುಟುಂಬಕ್ಕೆ ಮತ್ತು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಮೆಕ್ಯಾನಿಕ್ ಪ್ರವೀಣ್ ಆಚಾರ್ಯ ಇವರ ಕುಟುಂಬಕ್ಕೆ ಸಾಂತ್ವನ ನಿಧಿ ನೀಡಲಾಯಿತು.

LEAVE A REPLY

Please enter your comment!
Please enter your name here