ನಟ ಚೇತನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಹಿಂದೂ ಪರ ಹೋರಾಟಗಾರರಿಂದ ಬೆಳ್ತಂಗಡಿ ಪೊಲೀಸರಿಗೆ ದೂರು

0

ಬೆಳ್ತಂಗಡಿ: ಭೂತ ಕೋಲವು ಹಿಂದೂ ಸಂಸ್ಕೃತಿಯಲ್ಲ ಎಂದು ಹಿಂದೂ ದೈವದ ಬಗ್ಗೆ ಪದೇ, ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ, ನಟ ಚೇತನ್ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಹಿಂದೂ ಪರ ಹೋರಾಟಗಾರರು ಅ.20ರಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಅಲ್ಲದೆ ಬೇರೆ ಜಿಲ್ಲೆಗಳಲ್ಲಿ ಹಿಂದೂಗಳ ಮನೆ ಮನೆಗಳಲ್ಲಿ ದೇವಾಲಯದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ದೈವರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಆರಾಧನೆಯ ಬಗ್ಗೆ ತನ್ನ ಪ್ರಚಾರಕ್ಕೋಸ್ಕರ ಪೇಸ್‌ಬುಕ್, ಟಿವಿ ಮಧ್ಯಮಾಗಳಲ್ಲಿ ಅವಹೇಳನ ಮಾಡಿ, ಹಿಂದೂಗಳ ಭಾವನೆಗಳನ್ನು ಕೆರಳಿಸಿ ಚೇತನ್‌ ದಕ್ಕೆ ತಂದಿದ್ದಾರೆ.

ಭೂತ ಕೋಲವು ಹಿಂದೂ ಸಂಸ್ಕೃತಿ ಅಲ್ಲ ಅದರ ಪರಿ ಬೇರೆಯೇ ಆಗಿದೆ ಎಂದು ಹೇಳಿರುವುದು ಹಿಂದೂ ಸಂಸ್ಕೃತಿ ಬಗ್ಗೆ ಸಂಸ್ಕಾರ ಇಲ್ಲದವರ ಮಾತಾಗಿದೆ. ಸಮಸ್ತ ಹಿಂದೂ ಧರ್ಮಿಯರಿಗೆ ನಮ್ಮ ಧಾರ್ಮಿಕ ನಂಬಿಕೆಗೆ ತೀವ್ರ ಧಕ್ಕೆ ಉಂಟಾಗಿದ್ದು, ಅವರು ಸಮಸ್ತ ಹಿಂದೂ ಧರ್ಮಿಯರಲ್ಲಿ ಕ್ಷಮೆಯಾಚಿಸಬೇಕು. ಇನ್ನು ಮುಂದೆ ಇಂತಹ ಅಕೃತ್ಯಗಳನ್ನು ಮಾಡದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರು ನೀಡುವ ಸಂದರ್ಭದಲ್ಲಿ ಉಮೇಶ್ ಕುಲಾಲ್, ಜಗದೀಶ್ ಕನ್ನಾಜೆ, ಶರತ್ ಕುಮಾರ್, ಕರುಣಾಕರ ಬಂಗೇರ, ದಿನೇಶ್ ಶೆಟ್ಟಿ ಲ್ಯಾಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here