ಮಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಹೆಣ್ಣು ಮಕ್ಕಳ ಶಿಶುಪ್ರದರ್ಶನ ಕಾರ್ಯಕ್ರಮ

0

ಮಚ್ಚಿನ: ಮಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಹೆಣ್ಣು ಮಕ್ಕಳ ಶಿಶುಪ್ರದರ್ಶನ ಕಾರ್ಯಕ್ರಮ ಅ.19ರಂದು ನಡೆಯಿತು.

ಈ ಕಾರ್ಯಕ್ರಮವನ್ನು ತಣ್ಣೀರುಪಂಥ ಆಯುಷ್ ವೈದ್ಯಾಧಿಕಾರಿ ಡಾ|ಕೃಷ್ಣಪ್ರಸಾದ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಮೇಲ್ವಿಚಾರಕಿ  ಸುಮನಾ, ಮಚ್ಚಿನ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಅಧ್ಯಕ್ಷೆ  ಶ್ವೇತಾ ಹರೀಶ್, ಮಚ್ಚಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ  ಡೀಕಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು,ಮಕ್ಕಳು ಹಾಗೂ ಮಕ್ಕಳ ಪೋಷಕರು ಭಾಗವಹಿಸಿದರು.

ಡಾ| ಕೃಷ್ಣಪ್ರಸಾದ್ ಅವರು ಮಕ್ಕಳ ಆರೋಗ್ಯ ದ ಬಗ್ಗೆ ಮಾಹಿತಿ ನೀಡಿ ಮಕ್ಕಳಿಗೆ ಚ್ಯಾವನ್ಪ್ರಾಶ್ ವಿತರಿಸಿದರು ಇಲಾಖಾ ಮೇಲ್ವಿಚಾರಕಿ, ಆರೋಗ್ಯವಂತ ಹೆಣ್ಣು ಮಕ್ಕಳ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಆರೋಗ್ಯವಂತ ಹೆಣ್ಣುಮಕ್ಕಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು.

ತಾರೆಮಾರು ಅಂಗನವಾಡಿ ಕಾರ್ಯಕರ್ತೆ ಕುಮಾರಿ ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.ನೆತ್ತರ ಅಂಗನವಾಡಿ ಕಾರ್ಯಕರ್ತೆ  ಗೀತಲತಾ ಸ್ವಾಗತಿಸಿದರು. ಕಲ್ಲಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಮೀನಾ ಧನ್ಯವಾದ ಸಲ್ಲಿಸಿದರು. ಮಚ್ಚಿನ ಅಂಗನವಾಡಿ ಕೇಂದ್ರದ ಸಹಾಯಕಿ  ಬೇಬಿ ಸಹಕರಿಸಿದರು.

 

LEAVE A REPLY

Please enter your comment!
Please enter your name here