ಅಂಡಿಂಜೆ: ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ

0

ಅಂಡಿಂಜೆ: ಅಂಡಿಂಜೆ ಗ್ರಾ.ಪಂ ಇದರ ಆಶ್ರಯದಲ್ಲಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಭಾಗಿತ್ವದಲ್ಲಿ ಅ.20ರಂದು ಗ್ರಾ.ಪಂ ಸಭಾಂಗಣದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಹಾಗೂ ಹೊಸ ಪಾನ್ ಕಾರ್ಡ್, ಇಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಶಿಬಿರವು ಜರುಗಿತು.

ಶಿಬಿರದ ಉದ್ಘಾಟನೆಯನ್ನು ಗ್ರಾ.ಪಂ ಅಧ್ಯಕ್ಷೆ ಜಯಂತಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಪುತ್ತೂರು ಅಂಚೆ-ಇಲಾಖೆ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಕೆ.ಎಸ್ ಇವರು ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಹರೀಶ್ ಹೆಗ್ಡೆ, ಜಗದೀಶ್ ಹೆಗ್ಡೆ, ಶೋಭಾ ನಾಯ್ಕ, ಸುರೇಶ, ಕಾರ್ಯದರ್ಶಿ ಚಂಪಾ ಹಾಗೂ ಅಂಚೆ ಪಾಲಕರಾದ ಹರೀಶ್ ಸಾಲ್ಯಾನ್ ಕಾಶಿಪಟ್ನ, ಹರ್ಷಿತ್ ಕಾಶಿಪಟ್ನ, ಗಣೇಶ ಗೌಡ ಮೂಡಬಿದ್ರೆ ಹಾಗೂ ಅಶ್ವಿನಿ ಅಂಡಿಂಜೆ ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಗ್ರಾ.ಪಂ ಸಿಬ್ಬಂದಿಯಾದ ಶೀನ ಕೆ ಇವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಪಂಚಾಯತ್ ಸದಸ್ಯರಾದ ಹರೀಶ್ ಹೆಗ್ಡೆ ಇವರು ವಂದಿಸಿದರು.

LEAVE A REPLY

Please enter your comment!
Please enter your name here