ಬೆಳ್ತಂಗಡಿ: ಕರ್ನಾಟಕ ಸಿರೋಮಲಬಾರ್ ಕಥೋಲಿಕ್ ಅಸೋಸಿಯೆಷನ್ ಬೆಳ್ತಂಗಡಿ ಇದರ ಪದಗ್ರಹಣ ಮತ್ತು ನಾಯಕತ್ವ ಶಿಬಿರ

0

ಬೆಳ್ತಂಗಡಿ: ಕರ್ನಾಟಕ ಸಿರೋಮಲಬಾರ್ ಕಥೋಲಿಕ್ ಅಸೋಸಿಯೆಷನ್ ಬೆಳ್ತಂಗಡಿ ಇದರ ಪದಗ್ರಹಣ ಮತ್ತು ನಾಯಕತ್ವ ಶಿಬಿರವು ಅ.22ರಂದು ವಿಜ್ಞಾನ ನಿಲಯ ಬೆಳ್ತಂಗಡಿಯಲ್ಲಿ ಕೆಎಸ್ಎಂಸಿಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಪರಮ ಪೂಜ್ಯ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ನೆರವೇರಿಸಿ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕೆಎಸ್ಎಂಸಿಎ ಕೇಂದ್ರ ಸಮಿತಿ ನಿರ್ದೇಶಕರು ರೆ.ಫಾ ಶಾಜಿ ಮ್ಯಾಥ್ಯು ವೆಟ್ಟಂತಡತ್ತಿಲ್, ಕೆಎಸ್ಎಂಸಿಎ ಕೇಂದ್ರ ಸಮಿತಿ ಉಪಾಧ್ಯಕ್ಷ ಬೆನ್ನಿ ಕೋಲಂಚೇರಿ, ಮಾತ್ಯು ಅಂಜಿಲಿತೋಪ್ಪಿಲ್, ಕೆಎಸ್ಎಂಸಿಎ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಕೆ.ಕೆ ಸೆಬಾಸ್ಟಿನ್, ಕೆಎಸ್ಎಂಸಿಎ ಕೇಂದ್ರ ಸಮಿತಿ ಪಿ.ಆರ್.ಓ ಸೆಬಾಸ್ಟಿನ್ ಪಿ.ಸಿ, ಕೆಎಸ್ಎಂಸಿಎ ಕೇಂದ್ರ ಸಮಿತಿ ಕೋಶಾಧಿಕಾರಿ ಜಿಮ್ಸನ್ ಕೆ.ಜೆ, ಕೆಎಸ್ಎಂಸಿಎ ಕೇಂದ್ರ ಸಮಿತಿ ಜೊತೆ ಕಾರ್ಯದರ್ಶಿ ಅಲ್ಫೋನ್ಸ, ಕೆಎಸ್ಎಂಸಿಎ ಕೇಂದ್ರ ಸಮಿತಿ ಕಾರ್ಯಕ್ರಮ ಸಂಯೋಜಕರು ಜೋರ್ಜ್ ಟಿ ವಿ, ಕೆಎಸ್ಎಂಸಿಎ ಕೇಂದ್ರ ಸಮಿತಿ ಯುವಜನ ಸಂಯೋಜಕ ರೀನಾ ಶಿಬಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೆಎಸ್ಎಂಸಿಎ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here