ದೋಸೆಹಬ್ಬದಿ೦ದ ದೀಪಾವಳಿಗೆ ಹೆಚ್ಚಿದ ಮಹತ್ವ: ಅ.24ರಂದು ಪಿಲ್ಲಂಬುಗೋಳಿಯಲ್ಲೂ ತುಳುನಾಡ ಶೈಲಿಯ ದೋಸೆಹಬ್ಬ

0

ವೇಣೂರು: ದೀಪಾವಳಿ ಹಬ್ಬ ಬಂತೆಂದರೆ ಸಾಕು. ತುಳುನಾಡಿನ ಮನೆಮನೆಗಳಲ್ಲೂ ದೋಸೆ ತಿನಸು ಮಾಮೂಲಿ. ಬೆಳ್ಳಂಬೆಳಗ್ಗೆ ಮನೆಮನೆಗಳಲ್ಲಿ ತಯಾರಾಗುತ್ತಿದ್ದ ದೋಸೆಯ ಪರಿಮಳ ಇದೀಗ ಎಲ್ಲೆಡೆ ಪಸರಿಸಲಾರಂಭಿಸಿದೆ. ಸಾರ್ವಜನಿಕವಾಗಿ ದೋಸೆಹಬ್ಬ ಆಚರಿಸುವ ಮೂಲಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ದೀಪಾವಳಿಗೆ ವಿಶೇಷ ಮಹತ್ವ ಸಾರಿದ್ದರು. ಇದರ ಪರಿಣಾಮ ಇದೀಗ ತಾಲೂಕಿನ ಅಲ್ಲಲ್ಲಿ ದೋಸೆ ಹಬ್ಬ ಗಮನ ಸೆಳೆದಿದೆ.

ಅ. 24ರಂದು ಆರಂಬೋಡಿಯ ಶ್ರೀ ಪಂಚದುರ್ಗಾ ಗೆಳೆಯರ ಬಳಗದಿಂದ ಅನಾರೋಗ್ಯ ಪೀಡಿತ ಬಡ ಕುಟುಂಬಗಳ ಸಹಾಯಾರ್ಥವಾಗಿ ಪಿಲ್ಲಂಬುಗೋಳಿ ಶಾಲಾ ವಠಾರದಲ್ಲಿ ನಡೆಯುವ ದೀಪಾವಳಿ ಟ್ರೋಪಿ ಕ್ರೀಡಾಕೂಟದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ತುಳುನಾಡ ಶೈಲಿಯ ದೋಸೆ ಹಬ್ಬ ಏರ್ಪಡಿಸಿದ್ದಾರೆ.

ಶುಚಿರುಚಿಯಾಗಿರುವ ದೋಸೆಯನ್ನು ಸವಿದು ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ವಿನಂತಿಸಿದ್ದು, ಸಾರ್ವಜನಿಕ ದೋಸೆ ಹಬ್ಬದಿಂದ ದೀಪಾವಳಿಗೆ ವಿಶೇಷ ಮಹತ್ವ ಬಂದಿರುವುದಂತು ಸತ್ಯ.

LEAVE A REPLY

Please enter your comment!
Please enter your name here