Home_Page_Advt
Home_Page_Advt
Home_Page_Advt

ಗಂಡಿಬಾಗಿಲು ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಡಾ| ಶಾಹ್ ಮುಸ್ಲಿಯಾರ್‌ಗೆ ತಹ್ಲೀಲ್ ಸಮರ್ಪಣೆ, ಇಫ್ತಾರ್ ಕೂಟ

ಉಪ್ಪಿನಂಗಡಿ: ಕೊಯಿಲ ಗ್ರಾಮದ ಗಂಡಿಬಾಗಿಲು ಕುತುಬಿಯ್ಯಾ ಜುಮಾ ಮಸೀದಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ 3 ದಿನಗಳ ಹಿಂದೆ ನಿಧನ ಹೊಂದಿರುವ ಹಿರಿಯ  ಧಾರ್ಮಿಕ ವಿದ್ವಾಂಸ, ಸಮಸ್ತ ನೇತಾರ ಶೈಖುನಾ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್‌ರಿಗೆ ತಹ್ಲೀಲ್ ಸಮರ್ಪಣೆ ಹಾಗೂ ಇಫ್ತಾರ್ ಕೂಟ ಸಮಾರಂಭ ಮೇ. 31ರಂದು ಗಂಡಿಬಾಗಿಲು ಮದ್ರಸ ಸಭಾಂಗಣದಲ್ಲಿ ಜರಗಿತು.

ಸಮಾರಂಭದಲ್ಲಿ ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಸೆಯ್ಯದ್ ಅನಸ್ ತಂಙಳ್ ದುವಾಃ ನೆರವೇರಿಸಿ ಮಾತನಾಡಿ ಶೈಖುನಾ ಶಾಹ್ ಮುಸ್ಲಿಯಾರ್‌ರವರು ಕಳೆದ 48 ವರ್ಷಗಳಿಂದ ನಮ್ಮೀ ಸಂಸ್ಥೆಯ ಗೌರವಾಧ್ಯಕ್ಷರಾಗಿ ಮಾಡಿರುವ ಸೇವೆ ಮತ್ತು ಅವರ ನೇತೃತ್ವ, ಮಾರ್ಗದರ್ಶನ ಸದಾ ಜೀವಿತವಾಗಿರುವಂತದ್ದು, ಅವರು ನಮಗಾಗಿ ಬಿಟ್ಟು ಹೋಗಿರುವ ಸರಳ ವ್ಯಕ್ತಿತ್ವ, ತತ್ವ, ಆದರ್ಶಗಳು ನಮಗೆ ಎಂದೂ ಮಾದರಿ ಆಗಿರುತ್ತದೆ ಎಂದರು.

ಸಮಾರಂಭದಲ್ಲಿ ಅಬ್ದುಲ್ ರಹಿಮಾನ್ ಹಾಜಿ ಆತೂರು, ಹಿಮಾಯತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಮೂಸಾ ಮುಸ್ಲಿಯಾರ್, ಮುಅದ್ದಿಂ ರಫೀಕ್ ಮುಸ್ಲಿಯಾರ್, ಆದಂ ಮದನಿ ಗಂಡಿಬಾಗಿಲು, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಗಂಡಿಬಾಗಿಲು, ನೀರಾಜೆ ಮದ್ರಸದ ಮಾಜಿ ಅಧ್ಯಕ್ಷ ಪೊಡಿಕುಂಞ ನೀರಾಜೆ, ಗಂಡಿಬಾಗಿಲು ಮಸೀದಿ ಸಮಿತಿ ಅಧ್ಯಕ್ಷ ಹಸೈನಾರ್ ಹಾಜಿ, ಕಾರ್‍ಯದರ್ಶಿ ಜಿ. ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಎಸ್. ಆದಂ ಹಾಜಿ, ಜಿ. ಇಸ್ಮಾಯಿಲ್, ಆದಂ ಹಾಜಿ ಬಡ್ಡಮೆ, ಅಬ್ದುಲ್ ರಜಾಕ್ ಮರ್‍ವೇಲ್, ಜಿ. ಅಬ್ದುಲ್ ರಜಾಕ್, ಎಸ್. ಯಾಕೂಬ್, ಎಸ್. ಅಬ್ದುಲ್ ರಹಿಮಾನ್, ಯಂಗ್‌ಮೆನ್ಸ್ ಅಧ್ಯಕ್ಷ ಅಬ್ದುಲ್ ರಹಿಮಾನ್ ನೀರಾಜೆ, ಕಾರ್‍ಯದರ್ಶಿ ಝಕರಿಯಾ ನೇರೆಂಕಿ, ಯಾಕೂಬ್, ಹಂಝ ಮತ್ತಿತರರು ಉಪಸ್ಥಿತರಿದ್ದರು.

ಗಂಡಿಬಾಗಿಲು ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಎಸ್.ಪಿ. ಖಲಂದರ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಲತೀಫ್ ವಂದಿಸಿದರು. ಪದಾಧಿಕಾರಿಗಳಾದ ಇಸಾಕ್ ಬೊಳುಂಬುಡ, ನಿಸಾರ್, ಅನ್ಸಾರ್, ಆಶಿಫ್, ಹಾರಿಸ್ ಗಂಡಿಬಾಗಿಲು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.