ವಿವೇಕಾನಂದ ಪದವಿಪೂರ್ವ ವಿದ್ಯಾಲಯ ಮುಂಡಾಜೆಯಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಸಿ.ಪಿ.ಆರ್. ನೀಡುವ ತರಬೇತಿ

0

ಮುಂಡಾಜೆ :  ವಿವೇಕಾನಂದ ಮುಂಡಾಜೆ ಪದವಿಪೂರ್ವ ವಿದ್ಯಾಲಯದಲ್ಲಿ ಅ.21 ರಂದು ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ವಿಭಾಗದ ವತಿಯಿಂದ ಬೆನಕ ಹೆಲ್ತ್ ಸೆಂಟರ್ ಉಜಿರೆ ಇವರ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಹಾಗೂ ಸಿ.ಪಿ.ಆರ್. ನೀಡುವ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಜಾಲಿ ಡಿ ಸೋಜಾ ಇವರು ವಹಿಸಿಕೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆನಕ ಹೆಲ್ತ್ ಸೆಂಟರ್ ಇದರ ಕಾರ್ಯನಿರ್ವಾಹಕರಾದ ದೇವಸ್ಯ ವರ್ಗಿಸ್, ಮುಖ್ಯ ಶುಶ್ರೂಷಕಿ ಶ್ವೇತ ಮತ್ತು ಸಹಾಯಕರಾದ ನಾಸಿರ್ ಇವರು ಕಾರ್ಯಕ್ರಮ ನೆರವೇರಿಸಿ ಕೊಟ್ಟರು.

ಜೂನಿಯರ್ ರೆಡ್ ಕ್ರಾಸ್ ಇದರ ಕೌನ್ಸೆಲರ್ ಆಗಿರುವ  ಪುರುಷೋತ್ತಮ ಶೆಟ್ಟಿ ಇವರು ಸ್ವಾಗತಿಸಿ ಕಾರ್ಯಕ್ರಮವನ್ನು ಸಂಯೋಜಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ನಮಿತಾ , ರೋವರ್ಸ್ ಮತ್ತು ರೇಂಜರ್ಸ್ ಲೀಡರ್ಸ್ ಆಗಿರುವ ಕೃಷ್ಣ ಕಿರಣ್ ಮತ್ತು ವಸಂತಿ ಇವರು ಸಹಭಾಗಿತ್ವ ವಹಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿರುವ ಪದ್ಮನಾಭ ಇವರು ಧನ್ಯವಾದಿಸಿದರು. ವಿದ್ಯಾರ್ಥಿನಿಯರಾದ ಕೀರ್ತನಾ ಎ ಎಸ್ ಮತ್ತು ಸುಪ್ರೀತಾ ಇವರ ಪ್ರಾರ್ಥಿಸಿ, ಕನ್ನಡ ಉಪನ್ಯಾಸಕರಾಗಿರುವ ವಸಂತಿ ಇವರು ನಿರೂಪಿಸಿದರು.

LEAVE A REPLY

Please enter your comment!
Please enter your name here