ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ವಾಹನಗಳ ಶುದ್ಧೀಕರಣ ಮತ್ತು ಮಿಷನ್ ಸಂಡೆ ಆಚರಣೆ

0

ಉಜಿರೆ : ಇಲ್ಲಿಯ ಸಂತ ಅಂತೋಣಿ ಚರ್ಚ್ ನಲ್ಲಿ ವಾಹನಗಳ ಶುದ್ಧೀಕರಣ ಮತ್ತು ಮಿಷನ್ ಸಂಡೇ ಅ.23ರಂದು ನಡೆಯಿತು. ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಲ ವ. ಫಾ. ವಿಜಯ್ ಲೋಬೊ ದಿವ್ಯ ಬಲಿ ಪೂಜೆ ಅರ್ಪಿಸಿ ಮಿಷನ್ ಸಂಡೇ ಬಗ್ಗೆ  ಪ್ರವಚನ ನೀಡಿದರು.

ಪೂಜೆ ಬಳಿಕ ವಾಹನಗಳ ಆಶಿರ್ವಚನ ನಡೆಯಿತು. ನಂತರ ಮಿಷನ್ ಸಂಡೇ ಗಾಗಿ ವಸ್ತು ರೂಪ ದಲ್ಲಿ ಧಾನ ನೀಡಿದ ವಸ್ತುಗಳನ್ನು ಹರಾಜು ಮಾಡಲಾಯಿತು. ಒಂದು ಮೊಟ್ಟೆ ಕಥೆಯಂತೆ ಒಂದು ಮೊಟ್ಟೆ ರೂ.1050ಕ್ಕೆ ಹರಾಜು ಮಾಡಲಾಯಿತು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್,ಕಾರ್ಯದರ್ಶಿ ನಿತಿನ್ ಮೋನಿಸ್ ಹಾಗು ಪಾಲನಾ ಮಂಡಳಿ ಸದಸ್ಯರು ಭಾಗವಹಿಸಿ ಸಹಕರಿಸಿದರು. ಸಮಸ್ತ ಜನತೆಗೆ ಎಸ್ ಎ ಟ್ರಾನ್ಸ್ಪೋರ್ಟ್ ಮಾಲಕ ಸುನಿಲ್ ಡಿಸೋಜ ಪಾಲಹಾರ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here