ಸಚಿವ ಸುನಿಲ್ ಕುಮಾರ್ ಬೆಳ್ತಂಗಡಿ ಧರ್ಮಾಧ್ಯಕ್ಷರ ನಿವಾಸಕ್ಕೆ ಭೇಟಿ

0

ಬೆಳ್ತಂಗಡಿ : ಕರ್ನಾಟಕ ಸರಕಾರದ ಇಂಧನ , ಕನ್ನಡ ಮತ್ತು ಸಂಸ್ಕೃತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ  ವಿ. ಸುನಿಲ್ ಕುಮಾರ್ ಅವರು ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಧರ್ಮಾ ಧ್ಯಕ್ಷರ ನಿವಾಸಕ್ಕೆ ಅ.24ರಂದು ಧರ್ಮಾ ಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಇವರನ್ನು ಭೇಟಿ ಮಾಡಿದರು.

ಧರ್ಮಾ ಧ್ಯಕ್ಷರು ಪ್ರಸ್ತುತ ಸಂದರ್ಭದಲ್ಲಿ ಭಾರತ ದಲ್ಲಿನ ಕ್ರೈಸ್ತ ಧರ್ಮ ದ ಉದಯ ಹಾಗೂ ಇತರೆ ವಿಚಾರಗಳನ್ನು ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಸೀರೋ ಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್. ರಿ. (ಕೆ ಎಸ್ ಎಂ ಸಿ ಎ ) ಇದರ ವತಿಯಿಂದ  ಸಚಿವರನ್ನು ಗೌರವಿಸಲಾಯಿತು.

ಬೆಳ್ತಂಗಡಿಯ  ಶಾಸಕರಾದ  ಹರೀಶ್ ಪೂಂಜಾ ಸಚಿವರಿಗೆ ಜೊತೆ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ವಿಕಾರ್ ಜೆನೆರಲ್ ವಂದನಿಯ ಜೋಸ್ ವಲಿ ಯ ಪರಂಭಿಲ್,  ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್ ಇದರ ಕೇಂದ್ರ ಸಮಿತಿ ಅಧ್ಯಕ್ಷರಾದ  ಬಿಟ್ಟಿ ನೆಡುನಿಲಂ , ಪ್ರಧಾನಕಾರ್ಯದರ್ಶಿ  ಸಬಾಸ್ಟಿಯ್ಯನ್ ಎಂ ಜೆ ಗಂಡಿಬಾಗಿಲು, ಸಾರ್ವಜನಿಕ ಸಂಪರ್ಕ ಅಧಿಕಾರಿ  ಸೇಬಾಸ್ಟಿ ಯನ್ ಪಿ ಸಿ,  ಕೋಶಾಧಿಕಾರಿ  ಜಿಮ್ಸನ್ ಕೆ ಜೆ ಅಡ್ಡಹೊಳೆ ಅಲ್ಫೋನ್ಸ ಬೆಳ್ತಂಗಡಿ ಕೆ ಎಸ್ ಎಂ ಸಿ ಎ ವಲಯ ಅಧ್ಯಕ್ಷರು ಗಳಾದ  ಸೇಬಾಸ್ಟಿನ್ ಎನ್ ಜೆ,  ಧರ್ಮ ಪ್ರಾಂತ್ಯ ದ ಚಾನ್ಸಲರ್ ವಂದನಿಯ ಲಾರೆನ್ಸ್ ಪೂನೊಲಿಲ್ ಪ್ರಾಂತಿಯ ಜುಡಿಷಿಯಲ್ ವಿಕಾರ್ ವಂದನಿಯ ಫಾ /ಕುರ್ಯಾಕೋಸ್ ಉಪಸ್ಥಿತರಿದ್ದರು.

ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನಿಯ ಶಾಜಿ ಮಾತ್ಯು ಸ್ವಾಗತಿಸಿ ನ್ಯಾಯವಾದಿ ಶ್ರೀ ಅಭಿನ್ ಫ್ರಾನ್ಸಿಸ್ ಕಾರ್ಯಕ್ರಮ ವನ್ನು ನಿರೂಪಸಿದರು.

LEAVE A REPLY

Please enter your comment!
Please enter your name here