ಶ್ರೀ ರಾಮಕೃಷ್ಣ ಪ್ರೌಢಶಾಲಾ ವೃತ್ತಿ ಕಲಾ ಶಿಕ್ಷಕಿ ವನಿತಾ ಕುಮಾರಿರವರಿಗೆ ವಿದಾಯ ಸಮಾರಂಭ-ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಗೌರವದ ಸ್ಥಾನ- ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಅಪ್ರತಿಮಾ ಸಾಧನೆಗಳಿಂದಾಗಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಗೌರವದ ಸ್ಥಾನ ಇದೆ ಸಮಾಜದಲ್ಲಿ ದೊರೆತಿದೆ ಎಂದು ಪುತ್ತೂರು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜರವರು ಹೇಳಿದರು.

ಅವರು ಜೂ. 1 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವೃತ್ತಿ ಕಲಾ ಶಿಕ್ಷಕಿ ವನಿತಾ ಕುಮಾರಿರವರ ವಿದಾಯ ಸಮಾರಂಭ ಹಾಗೂ ೨೦೧೯-೨೦ರ ಸಾಲಿನಲ್ಲಿ ಸಂಸ್ಥೆಗೆ ಸೇರ್ಪಡೆಯಾದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿ ಉತ್ತಮ ಶಿಕ್ಷಕಿಯರ ಸಮೂಹ, ಅನುಭವಿ ಆಡಳಿತ ಮಂಡಳಿ ಹಾಗೂ ಶಿಸ್ತುಬದ್ಧ ವಿದ್ಯಾರ್ಥಿಗಳನ್ನು ಹೊಂದಿರುವ ಶ್ರೀ ರಾಮಕೃಷ್ಣ ಪ್ರೌಢಶಾಲೆ ಬಹಳ ಎತ್ತರವಾದ ಸ್ಥಾನವನ್ನು ಏರಿ ನಿಂತಿದೆ.ಇಂಥ ಸಂಸ್ಥೆಯಿಂದ ಶಿಕ್ಷಣದ ಕ್ರಾಂತಿಯಾಗಿದೆ. ಬಂಟ ಸಮಾಜದವರು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಯು ಇನ್ನಷ್ಟು ಬೆಳೆಯಲಿ. ಇಲ್ಲಿ ೩೩ ವರ್ಷಗಳ ಕಾಲ ವೃತ್ತಿ ಕಲಾ ಶಿಕ್ಷಕಿಯಾಗಿ ಸೇವೆಗೈದ ವನಿತಾ ಕುಮಾರಿರವರ ಕರ್ತವ್ಯ ಪ್ರಜ್ಞೆ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಹೇಳಿ, ಭಾರತದ ಕೀರ್ತಿಯನ್ನು ಉಳಿಸುವ ಕಾರ್‍ಯವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಸುಬ್ರಹ್ಮಣ್ಯ ನಟ್ಟೋಜರವರು ಹೇಳಿದರು.

ಅನುಭವಿ ಶಿಕ್ಷಕಿಯರ ಸೇವಾಕಾರ್‍ಯ- ಕಾವು ಹೇಮನಾಥ ಶೆಟ್ಟಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ೩೬ ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 22 ವಿದ್ಯಾರ್ಥಿಗಳು ಅಂತಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯು ಭಾರತ ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿ ಸಂಸ್ಥೆಯಲ್ಲಿ ಸಾರ್ಥಕವಾದ ಸೇವೆಗೈದು ನಿವೃತ್ತರಾದ ಶಿಕ್ಷಕಿ ವನಿತಾ ಕುಮಾರಿರವರ ಸೇವೆಯೂ ಇನ್ನೂ ಸಂಸ್ಥೆಗೆ ಬೇಕು ಎಂದು ಆಶಯ ವ್ಯಕ್ತಡಿಸಿದರು.

ವಿದಾಯ ಸಮಾರಂಭ-ಸನ್ಮಾನ
33 ವರ್ಷಗಳ ಕಾಲ ವೃತ್ತಿ ಕಲಾ ಶಿಕ್ಷಕಿಯಾಗಿದ್ದ ವನಿತಾ ಕುಮಾರಿರವರನ್ನು ಸನ್ಮಾನಿಸಿ, ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ವನಿತಾ ಕುಮಾರಿರವರ ಹುಟ್ಟುಹಬ್ಬ ಆಚರಣೆಯು ನಡೆಯಿತು. ವನಿತಾ ಕುಮಾರಿರವರ ಪತಿ ಸದಾನಂದ ರಾವ್, ಪುತ್ರ ರಜತ್ ಎಸ್ ರಾವ್‌ರವರುಗಳು ಉಪಸ್ಥಿತರಿದ್ದರು.

ವಿದಾಯ ಸಮಾರಂಭದ ಗೌರವವನ್ನು ಸ್ವೀಕರಿಸಿ, ಮಾತನಾಡಿದ ವನಿತಾ ಕುಮಾರಿರವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಸಹ ಸಂಚಾಲಕ ಅಜಯ್ ಆಳ್ವ ಬಳ್ಳಮಜಲು, ಶಾಲಾ ಆಡಳಿತ ಸಮಿತಿಯ ಸದಸ್ಯರುಗಳಾದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ರಘುನಾಥ ರೈ ನುಳಿಯಾಲು, ಜಯಪ್ರಕಾಶ್ ರೈ ನೂಜಿಬೈಲು, ಪ್ರೇಮಲತಾ ರೈ, ಹರಿಣಾಕ್ಷಿ ಜೆ,ಶೆಟ್ಟಿ, ನಿರಂಜನ್ ರೈ ಮಠಂತಬೆಟ್ಟು, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಹಾಸ್ ಶೆಟ್ಟಿ ಎನ್, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಡಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಎನ್ ಮನೋಹರ ರೈ, ಮಾಲತಿ ಎನ್‌ರವರುಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ರೂಪಕಲಾ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ವಂದಿಸಿದರು. ಶಿಕ್ಷಕಿಯರಾದ ಗಾಯತ್ರಿ, ಪ್ರೀತಾ ಕಾರ್‍ಯಕ್ರಮ ನಿರೂಪಿಸಿದರು.

ಅಚ್ಚುಕಟ್ಟಾದ ಸಮಯಪಾಲನೆಯ ಕಾರ್‍ಯಕ್ರಮ ,ವಿದ್ಯಾರ್ಥಿಗಳಿಗೆ ಪುಸ್ತುಕ ಉಡುಗೊರೆ:
ಬೆಳಿಗ್ಗೆ ೧೧ ಗಂಟೆಗೆ ಆರಂಭವಾದ ವಿದಾಯ ಸಮಾರಂಭ ಮತ್ತು ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್‍ಯಕ್ರಮವು ಮಧ್ಯಾಹ್ನ ೧ ಗಂಟೆಗೆ ಮುಕ್ತಾಯವಾಯಿತು. ಕಾರ್‍ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಸಂಘಟಕರು ನಿರ್ವಹಿಸಿದರು, ಸಮಾರಂಭದಲ್ಲಿ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಶೈಕ್ಷಣಿಕ ವರ್ಷದಲ್ಲಿ ದಾಖಲಾದ ೧೫೩ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಪುಸ್ತಕವನ್ನು ಉಡುಗರೆಯಾಗಿ ನೀಡಲಾಯಿತು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.