ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತುತ್ಸವದ ಸಭಾ ಕಾರ್ಯಕ್ರಮ

0

ಧರ್ಮಸ್ಥಳ: ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತುತ್ಸವದ ಸಭಾ ಕಾರ್ಯಕ್ರಮವು ಮಹೋತ್ಸವ ಸಭಾಭವನದಲ್ಲಿ ಅ.24ರಂದು ಜರುಗಿತು.

ಕಾರ್ಯಕ್ರಮವನ್ನು ಶ್ರೀ ಧಾಮ ಮಾಣಿಲದ ಮೋಹನದಾಸ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ  ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ,  ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಡಿ.ಸುರೆಂದ್ರ ಕುಮಾರ್,  ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮ:

ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರಿಗೆ ಪೂಜ್ಯ ಶ್ರೀ ಹೆಗ್ಗಡೆಯವರು ಗೌರವಾರ್ಪಣೆಯನ್ನು ಮಾಡಿದರು. ಹಾಗೂ ವಿನಾಯಕ ಹವನ ಷೋಡಶಸಂಸ್ಕಾರ ವಿಧಿ ಬೊಕ್ಕೊ ವೈದ್ಯ ಸಂಗ್ರಹೊ ಎನ್ನುವ ಪುಸ್ತಕವನ್ನು ಡಾ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ನಂತರ ಪುಸ್ತಕದ ಸಂಪಾದಕರಾದ ಡಾ.ವಿಘ್ನರಾಜ್ ಭಟ್ ಇವರನ್ನು ಸನ್ಮಾನಿಸಲಾಯಿತು.

ಪಟ್ಟಾಭಿಷೇಕದ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಯ 4 ತಂಡಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ನಂತರ ಪೂಜ್ಯ ಖಾವಂದರಿಗೆ ಅಭಿಮಾನಿಗಳು ಹಾರಾರ್ಪಣೆಗೈದರು.

ಕಾರ್ಯಕ್ರಮದಲ್ಲಿ ವಸಂತ ಮಂಜಿತ್ತಾಯ, ಮಣಿಗಾರ್ ಮತ್ತು ಬಳಗ ದವರಿಂದ ವೇದಘೋಷ ನಡೆಯಿತು. ಧರ್ಮಸ್ಥಳ ೆಸ್ ಡಿಯಂ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ  ಮಾಡಿದರು. ಪ್ರಭಾಕರ್ ಡಿಯಂಸಿ ವಂದನಾರ್ಪಣೆ ಗೈದರು.

 

LEAVE A REPLY

Please enter your comment!
Please enter your name here