ಗೋವಿಂದೂರು ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ರಾಜ್ಯ ಮಟ್ಟದ 500ಕೆ.ಜಿ ವಿಭಾಗದ ಫುಲ್ ಗ್ರೀಪ್ ಹಗ್ಗಜಗ್ಗಾಟ ಸ್ಪರ್ಧೆ

0

ಕಳಿಯ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಗೋವಿಂದರು. ಇದರ ಸಾಲದ ಸಮಿತಿಯಿಂದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ರಾಜ್ಯ ಮಟ್ಟದ ಹಗ್ಗಜಗ್ಗಾಟ ಕಳಿಯ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಗೋವಿಂದೂರು ಇದರ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ.ಅ.22ರಂದು ಗೋವಿಂದೂರು ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ರಾಜ್ಯ ಮಟ್ಟದ 500ಕೆ.ಜಿ ವಿಭಾಗದ ಫುಲ್ ಗ್ರೀಪ್ ಹಗ್ಗಜಗ್ಗಾಟ ಸ್ಪರ್ಧೆ ಜರುಗಿತು.

ಕಾರ್ಯಕ್ರಮವನ್ನು ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಭಾಷಿನಿ ಜನಾರ್ಧನ ಗೌಡ ಉದ್ಘಾಟಿಸಿ ಮಾತನಾಡಿ ಈ ಶಾಲೆಗೆ ಆರ್ಥಿಕ ಶಕ್ತಿಯನ್ನು
ತುಂಬಲು ಈ ಶಾಲಾಭಿವೃದ್ಧಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮತ್ತು ಊರವರು ಸೇರಿ ಈ ಕ್ರೀಡೋತ್ಸವವನ್ನು ಆರಂಭಿಸಿದ್ದಾರೆ. ಇದು ಯಶಸ್ವಿಯಾಗಲಿ. ಶಾಲೆಗೆ ಬೇಕಾದ ಸವಲತ್ತು ಮತ್ತು ಅಭಿವೃದ್ಧಿಯಾಗಲಿ ಎಂದರು.

ಶಾಲೆಯ ಮುಖ್ಯೋಪಾಧ್ಯಾಯರಾದ ರೇಶ್ಮಾ  ಪ್ರಸ್ತಾವಿಕವಾಗಿ ಮಾತನಾಡಿದರು. ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ,  ಗೋಕರ್ಣನಾಥ ಕಾಲೇಜಿನ ಪ್ರಾಂಶುಪಾಲರಾದ ಕೇಶವ ಬಂಗೇರ, ಕಳಿಯ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕುಸುಮ ಬಂಗೇರ, ಸದಸ್ಯರಾದ ಸುಧಾಕರ್ ಮಜಲು ಯಶೋಧರ ಶೆಟ್ಟಿ, ಲತೀಫ್, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ಧನ ಗೌಡ,
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್, ಆದರ್ಶ್ ಕೊರೆಯ,ಹೈದರ್,  ದಿನೇಶ್ ಪೂಜಾರಿ, ಅಬ್ಬುಲ್ ಕುಂಞ ಮುಂತಾದರೂ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀನಿವಾಸ ಗೌಡ ಶಾಲಾ ಸ್ಥಾಪಕರಾದ ಜಗನ್ನಾಥ್ ಇವರನ್ನು ಸನ್ಮಾನಿಸಲಾಯಿತು.
ಸಹಕಾರ ಭಾರತಿ ಅಧ್ಯಕ್ಷರಾದ ರಾಜೇಶ್ ಪೆಂರ್ಬುಡ ಸ್ವಾಗತಿಸಿ , ಉಮೇಶ್ ಕೇಲ್ದಡ್ಕ ನಿರೂಪಿಸುದರು. ಸುಧಾಕರ ಮಜಲು ವಂದಿಸಿದರು.

LEAVE A REPLY

Please enter your comment!
Please enter your name here