ಸಾಹಿತ್ಯ ಉತ್ಸವದಲ್ಲಿ ಸಾವಯವ ತರಕಾರಿ ಸಂತೆ – ಸಂಗೀತ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ ಜಿಲ್ಲಾ ೧೮ನೇಯ ಕನ್ನಡ ಸಾಹಿತ್ಯ ಸಮ್ಮೇಳನ ದತ್ತಿನಿಧಿ ಕಾರ್ಯಕ್ರಮಕ್ಕೆ ಅನುಗುಣವಾಗಿ ಜೂ.೨ರಂದು ಬೆಳಿಗ್ಗೆ ಸಾವಯವ ತರಕಾರಿ ಸಂತೆ ನಡೆಯಿತು. ಪ್ರೊ. ಎ.ವಿ. ನಾರಾಯಣ ತರಕಾರಿ ಸಂತೆಗೆ ಚಾಲನೆ ನೀಡಿದರು.
ಹಸಿ ಹಣ್ಣು ತರಕಾರಿ, ದಿನಸಿ ಸಾವಯವ ಉತ್ಪನ್ನಗಳ ಹಾಗೂ ಮೌಲ್ಯ ವರ್ಧಿತ ವಸ್ತುಗಳ ಪ್ರದರ್ಶನ, ಮಾರಾಟದಲ್ಲಿ ನೂರಾರು ಮಂದಿ ಇದರ ಸದುಪಯೋಗ ಪಡೆದರು.


ವಿದುಷಿ ಸುಚಿತ್ರಾ ಹೊಳ್ಳ ಶಿಷ್ಯರಿಂದ ಸಂಗೀತ ಕಾರ್ಯಕ್ರಮ: ಸಾವಯವ ತರಕಾರಿ ಸಂತೆ ಉದ್ಘಾಟನೆಯ ಬಳಿಕ ನಟರಾಜ ವೇದಿಕೆಯಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಅವರ ಶಿಷ್ಯ ವೃಂದದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರೊ. ವಿ.ಬಿ. ಅರ್ತಿಕಜೆಯವರು ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ ಶಾಸ್ತ್ರೀಯ ಸಂಗೀತ ಕಲೆಗೆ ಮನಸ್ಸನ್ನು ಅರಳಿಸುವ ಶಕ್ತಿ ಇದೆ ಎಂದು ಹೇಳಿದರು.


ಸಾವಯವ ತರಕಾರಿ ಸಂತೆಗೆ ಚಾಲನೆ ನೀಡಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎ.ವಿ. ನಾರಾಯಣ್ ಅವರು ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಈಗ ಸಾವಯವ ಪದ್ಧತಿಗೆ ಆದ್ಯತೆ ಸಿಗುತ್ತಿದೆ. ಆರೋಗ್ಯ ವರ್ಧಕ ವಿಚಾರಗಳನ್ನು ಸದುಪಯೋಗ ಪಡೆಯಬೇಕೆಂದರು. ದ,.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ ಅವರು ಮಾತನಾಡಿ ರಾಸಾಯನಿಕ ಬಳಕೆಯಿಂದ ವಿಷವಾದ ಆಹಾರ ತೊಂದರೆ ಕೊಡುತ್ತಿದೆ. ನಾವು ಮತ್ತೆ ಈ ಮಣ್ಣಿನ ಮೂಲ ಕೃಷಿ ಸಂಪ್ರದಾಯವಾದ ಸಾವಯವ ಕೃಷಿಯತ್ತ ತೊಡಗಬೇಕಾಗಿದೆ ಎಂದರು. ವಿದೂಷಿ ಸುಚಿತ್ರಾ ಹೊಳ್ಳ ಅವರು ಮಾತನಾಡಿ ಶಾಸ್ತ್ರೀಯ ಸಂಗೀತವು ಸಾವಯವ ತರಕಾರಿಯಂತೆ ಯಾವುದೇ ಕಲಬೆರಕೆ ಇಲ್ಲದ ಶುದ್ಧತೆಯನ್ನು ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತಪ್ಪ ನಾಯ್ಕ್, ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸರೋಜಿನ ನೇನಾಲ ಸ್ವಾಗತಿಸಿ, ವಂದಿಸಿದರು. ಜ್ಯೋತಿ ರಾವ್ ಎಚ್. ಮತ್ತು ಜೋತ್ಸ್ನಾರಾವ್ ಎಚ್. ಕಾರ್ಯಕ್ರಮ ನಿರೂಪಿಸಿದರು.


ಪುಸ್ತಕ ಪ್ರದರ್ಶನದಲ್ಲಿ ಕೈ ಮಗ್ಗದ ನೇಕಾರಿಕೆ ಕಾದಿ ಬಟ್ಟೆಗಳು: ಪುತ್ತೂರು: ಖಾದಿ ಬಟ್ಟೆ ಸಂಪೂರ್ಣ ಸ್ವದೇಶಿ ಉಡುಪು. ಸ್ವಾತಂತ್ರ್ಯ ಚಳುವಳಿಯ ಕಾಲದಿಂದಲೇ ಖಾದಿಯು ಭಾರತೀಯತೆಯ ಜಾಗೃತಿಯನ್ನು ಉಂಟುಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಖಾದಿ ಬಟ್ಟೆಗೆ ಪ್ರೋತ್ಸಾಹ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೩ ದಿನಗಳ ಕಾಲ ಪುತ್ತೂರಿನಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಸಹಕಾರಿ ಖಾದಿ ಮಳಿಗೆಯೊಂದು ಗ್ರಾಹಕರನ್ನು ಆಕರ್ಷಿಸುತ್ತಿದೆ. ಹೊಸನಗರ ತಾಲೂಕಿನ ಪರಪ್ಪು ಮನೆಯಲ್ಲಿ ಘಟಕವನ್ನು ಹೊಂದಿರುವ ಉಡುಪಿ ಜಿಲ್ಲಾ ಮೂಲದ ಮಂದಾರ್ತಿ ಕೈಮಗ್ಗ ನೇಕಾರರ ಸಹಕಾರ ಸಂಘದದಿಂದ ಪುಸ್ತಕ ಪ್ರದರ್ಶನದಲ್ಲಿ ಕೌಂಟರ್ ತೆರೆದಿದೆ. ಈ ಮಳಿಗೆಯಲ್ಲಿ ಮಹಿಳೆಯರಿಗಾಗಿ ಇಳಕಲ್, ಸಾಗರದ ಕೈಮಗ್ಗದ ಸೀರೆಗಳು ಪುರುಷರಿಗಾಗಿ ಖಾದಿ ಶರ್ಟ್‌ಗಳು, ಕುರ್ತಾಗಳು, ಧೋತಿಗಳು, ಲುಂಗಿಗಳು, ಕರವಸ್ತ್ರಗಳು, ಬಾತ್ ಟವೆಲ್‌ಗಳು ಹೀಗೆ ನಾನಾ ರೀತಿಯ ಖಾದಿ ಸಿದ್ಧ ಉಡುಪುಗಳು ಇಲ್ಲಿ ಲಭ್ಯ ಮಳಿಗೆಯ ವ್ಯವಸ್ಥಾಪಕಿ ನಾಗರತ್ನ ಖಾದಿ ಬಟ್ಟೆಯ ಮಾಹಿತಿ ನೀಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.