HomePage_Banner
HomePage_Banner
HomePage_Banner
HomePage_Banner

ಈಶ್ವರಮಂಗಲ: ಸಮಸ್ತ ಅಧೀನದಲ್ಲಿ ಫಾತಿಮಾ ಮಹಿಳಾ ಕಾಲೇಜಿನ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ್ವರಮಂಗಲ ಮೇನಾಲ ಜಮಾಅತ್ ಕಮಿಟಿಯ ಸಹಯೋಗದಲ್ಲಿ ಸಮಸ್ತ ಸಂಘಟನೆಯ ಅಧೀನದಲ್ಲಿ ಕಾರ್ಯಾಚರಿಸಲಿರುವ ಫಾತಿಮಾ ಮಹಿಳಾ ಕಾಲೇಜಿನ ಸಮಾಲೋಚನಾ ಸಭೆ ಸಮಸ್ತ ಮುಫತ್ತೀಸ್ ಆದ ಉಮರ್ ದಾರಿಮಿ ಸಾಲ್ಮರ ಅವರ ಅಧ್ಯಕ್ಷತೆಯಲ್ಲಿ ಮೇನಾಲ ಮದ್ರಸ ಹಾಲ್‌ನಲ್ಲಿ ನಡೆಯಿತು. ಸಮಸ್ತ ಈ ವರ್ಷದಿಂದ ಮಹಿಳಾ ಕಾಲೇಜು ಪ್ರಾರಂಭಿಸಲು ಅನುಮತಿ ನೀಡಿದ್ದು ಈ ವರ್ಷ ಕೇರಳ ಮತ್ತು ಕರ್ನಾಟಕದಿಂದ ಸುಮಾರು ೮೭ ಕಾಲೇಜು ಗಳಿಗೆ ಮಾನ್ಯತೆ ನೀಡಿದೆ ಎಂದ ಉಮ್ಮರ್ ದಾರಿಮಿಯವರು ಕಾಲೇಜಿನ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.


ರೇಂಜ್ ಮುಅಲ್ಲೀಮೀನ್ ಅಧ್ಯಕ್ಷ ಶಂಸುದ್ದೀನ್ ದಾರಿಮಿ ಪಮ್ಮಲ, ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಖಾದರ್ ಹಾಜಿ ಹಿರಾ, ಸ್ಥಳೀಯ ಜುಮಾ ಮಸೀದಿ ಮುದರ್ರೀಸ್ ಶಿಹಾಬುದ್ದೀನ್ ಮುಸ್ಲಿಯಾರ್, ಜಮಾಅತ್ ಕಮಿಟಿ ಅಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಇ ಎಚ್ ಅಬ್ದುಲ್ ಖಾದರ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಮಾಜಿ ಅಧ್ಯಕ್ಷ ಮಹಮದ್ ಹಾಜಿ ಆದೂರು, ಗ್ರಾ.ಪಂ.ಸದಸ್ಯರಾದ ಕೆ.ಎಂ.ಮಹಮದ್ ಕುಂಞಿ, ಇ.ಎಚ್.ಇಸ್ಮಾಯಿಲ್, ಅಶ್ರಫ್ ಎ.ಬಿ, ಇ.ಪಿ.ಮಮ್ಮದ್ ಕುಂಞಿ, ಮತ್ತು ಜಮಾಅತ್ ಕಮಿಟಿಯ ಸದಸ್ಯರು ಹಾಗೂ ಫಾತಿಮಾ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಸಮಸ್ತ ಅಧ್ಯಕ್ಷರ ಭೇಟಿ:
ಸಮಸ್ತ ವಿಮೆನ್ಸ್ ಇಸ್ಲಾಮಿಕ್ ಆರ್ಟ್ಸ್ ಕಾಲೇಜು ಇದರ ಮೆನೇಜ್‌ಮೆಂಟ್ ಮೀಟ್ ಕ್ಯಾಲಿಕಟ್ ಸಮಸ್ತ ಆಡಿಟೋರಿಯಂನಲ್ಲಿ ನಡೆಯಿತು. ಸಮಸ್ತ ಅಧ್ಯಕ್ಷ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್‌ರವರನ್ನು ಇದೇ ವೇಳೆ ಈಶ್ವರಮಂಗಲ ಮೇನಾಲ ಫಾತಿಮಾ ಕಾಲೇಜಿನ ಆಡಳಿತ ಸಮಿತಿ ಪ್ರಮುಖರು ಭೇಟಿಯಾಗಿ ಮಾತುಕತೆ ನಡೆಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.