ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ವಿಶೇಷ ಚೇತನರಿಗೆ ಬದುಕು ಸ್ವ ಸಹಾಯ ಸಂಘ ರಚನೆ ಹಾಗೂ ಬದುಕಿಗೊಂದು ನಿಧಿ ಹಸ್ತಾಂತರ ಕಾರ್ಯಕ್ರಮ ಉದ್ಘಾಟನೆ

0

ಧರ್ಮಸ್ಥಳ: ಅಂತರರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ವಿಕಲಚೇತನರಿಗೆ ಬದುಕು ಸ್ವಸಹಾಯ ಸಂಘ ದ
ಉದ್ಘಾಟನೆಯು ಕನ್ಯಾಡಿ11ಯ ಕಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಅ23ರಂದು ನಡೆಯಿತು.

ಗ್ರಾಮ ಪಂಚಾಯತ್ ಧರ್ಮಸ್ಥಳ ಉಪಾಧ್ಯಕ್ಷ ಶ್ರೀನಿವಾಸ್ ಪುಟಾಣಿ ಅವರು ಉದ್ಘಾಟಿಸಿ ಮಾತನಾಡಿ ಇದು ಸಮಾಜದಲ್ಲಿ ವಿಶೇಷಚೇತನರಿಗೆ ನೀಡಿದ ವಿಶೇಷವಾದ ಕಾರ್ಯಕ್ರಮವಾಗಿದೆ. ವಿಶೇಷ ಚೇತನರಿಗೆ ನಮಗಿಂತ ಬುದ್ದಿ ಜಾಸ್ತಿ ಇದ್ದು, ಈ ದೀಪಾವಾಳಿ ಶುಭ ಸಂದರ್ಭದಲ್ಲಿ ವಿಕಲಚೇತನರಿಗೆ ಬದುಕು ಸ್ವಸಹಾಯ ಸಂಘ ವನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸೇವೆಯನ್ನು ನೀಡಿದೆ.ಈ ಸ್ವಸಹಾಯ ಸಂಘದಿಂದ ಸಹ ಉದ್ಯೋಗಕ್ಕೆ ಒತ್ತು ನೀಡಿ ,ನಿಮ್ಮ ಬದುಕನ್ನು ಬೆಳಗಿಸಿ ಎಂದರು.

ನಂತರ ಸ್ವ ಸಹಾಯ ಸಂಘಕ್ಕೆ ಪುಸ್ತಕ ಹಾಗೂ ಬ್ಯಾಗ್ ನ್ನು ವಿತರಿಸಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಬೊಲ್ಮ ವಹಿಸಿದ್ದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಮಾಜಿ ಕಾರ್ಯದರ್ಶಿ ಕೃಷ್ಣ ಆಚಾರ್ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಬದುಕು ಸ್ವ ಸಹಾಯ ಸಂಘ ಕ್ಕೆ ನಿಧಿ ಹಸ್ತಾಂತರಿಸಿದರು.

ವಿಶೇಷಚೇತನರಿಗೆ ಬೆಳ್ತಂಗಡಿ ಲಯನ್ಸ್ ಕ್ಲಬ್ ನೀಡಿದ ವಿಶೇಷ ಕಾರ್ಯಕ್ರಮ ಎಂದರು, ಸದ್ರಿ ಸ್ವಸಹಾಯ ಸಂಘವನ್ನು ನಿರ್ವಹಣೆಗಾಗಿ ಸರಕಾರದ ಸಂಜೀವಿನಿ ಸ್ವಸಹಾಯ ಸಂಘ ಒಕ್ಕೂಟಕ್ಕೆ ಹಸ್ತಾಂತರ ಮಾಡಲಾಯಿತು. ಸಂಜೀವಿನಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಬೆಳ್ತಂಗಡಿ ಲಯನ್ಸ್ ಕ್ಲಬ್ ವಿಶೇಷ ಚೇತನರಿಗೆ ಮಾಡಿದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಾಂತಿಯ ಅಧ್ಯಕ್ಷರಾದ ವಸಂತ್ ಶೆಟ್ಟಿ ಶ್ರದ್ಧಾ ಸಂಜೀವಿನಿ
ಸ್ವಸಹಾಯ ಸಂಘದ ಅಧ್ಯಕ್ಷರಾದ  ರಮ್ಯ, ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಚಂದ್ರವತಿ, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಹರೀಶ್,
ಲಯನ್ಸ್ ಸದಸ್ಯರಾದ ಚಂದ ಕುಮಾರ್ ಶೆಟ್ಟಿ, ಅಖಿಲೇಶ್ ಕುಮಾರ್ ಶೆಟ್ಟಿ, ಕಿರಣ್ ದೊಂಡೊಲೆ, ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಲಯನ್ಸ್ ಕಾರ್ಯದರ್ಶಿ ತುಕಾರಾಮ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here