Home_Page_Advt
Home_Page_Advt
Home_Page_Advt

ಮೈದಾನಿಮೂಲೆ: ಸುನ್ನೀ ಸೆಂಟರ್ ಉದ್ಘಾಟನೆ

ಪುತ್ತೂರು: ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಮೈದಾನಿಮೂಲೆ ಶಾಖೆ ವತಿಯಿಂದ ಸುನ್ನೀ ಸೆಂಟರ್ ಉದ್ಘಾಟನೆ ಹಾಗೂ ಬೃಹತ್ ಇಫ್ತಾರ್ ಸಂಗಮ ಜೂ.೧ರಂದು ನಡೆಯಿತು. ಸುನ್ನೀ ಸೆಂಟರ್ ಉದ್ಘಾಟನೆಯನ್ನು ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ನೆರವೇರಿಸಿದರು. ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ಸಂದೇಶವನ್ನು ನೀಡಿದ ಮೈದಾನಿಮೂಲೆ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ ಸಂಘಟನೆಗಳು ಸಮಾಜದ ಬೆಳಕಾಗಿ ಕಾರ್ಯಾಚರಿಸಿದಾಗ ಆ ಊರು ಬೆಳಗುವುದರಲ್ಲಿ ಸಂಶಯವಿಲ್ಲ, ಎಸ್ಸೆಸ್ಸಫ್ ಸಂಘಟನೆಯು ಉಲಮಾಗಳು ನೇತೃತ್ವ ನೀಡುತ್ತಿರುವ ಸಂಘಟನೆಯಾಗಿದೆ. ಇಹಪರ ಜೀವನಗಳಲ್ಲಿ ಯಶಸ್ಸು ಸಾಧಿಸಬೇಕಾದಲ್ಲಿ ಎಸ್ಸೆಸ್ಸೆಫ್‌ನೊಂದಿಗೆ ಕೈಜೋಡಿಸಿ ಕಾರ್ಯಾಚರಿಸಿ ಎಂದು ಹೇಳಿದರು. ಸಿ.ಎಂ ಹನೀಫ್ ಬೆಳ್ಳಾರೆ, ಪುತ್ತೂರು ವರ್ತಕ ಸಂಘದ ಉಪಾಧ್ಯಕ್ಷ ಯೂಸುಫ್ ಮೈದಾನಿಮೂಲೆ, ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಪ್ರ.ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಮಾತನಾಡಿ ಶುಭ ಹಾರೈಸಿದರು.


ಮೈದಾನಿಮೂಲೆ ಜಮಾಅತ್ ಗೌರವಾಧ್ಯಕ್ಷ ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು, ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ರೋಯಲ್ ಗ್ರೂಪ್‌ನ ಅಶ್ರಫ್ ಮುಳಿಯಡ್ಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ, ಜಮಾಅತ್ ಪ್ರಧಾನ ಕಾರ್ಯದರ್ಶಿ ರಫೀಕ್ ಅಲ್‌ರಾಯ, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಜಮಾಅತ್ ಕೋಶಾಧಿಕಾರಿ ಇಬ್ರಾಹಿಂ ನೀರ್ಪಾಡಿ, ಟೀಂ ಇಸಾಬ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ದಖೀರತುಲ್ ಉಖ್ರಾ ಯಂಗ್‌ಮೆನ್ಸ್ ಅಧ್ಯಕ್ಷ ಮಹಮ್ಮದ್ ಉಜ್ರೋಡಿ, ಸದರ್ ಇರ್ಫಾನ್ ಹಿಮಮಿ, ಮುಅಝ್ಝಿನ್ ಅಬ್ದುಲ್ ರಝಾಕ್ ಮುಸ್ಲಿಯಾರ್, ಶಾಹುಲ್ ಹಮೀದ್ ಕಬಕ, ರಝಾಕ್ ಹಾಜಿ ಕಸ್ತೂರಿ, ಅಶ್ರಫ್ ಉಜ್ರೋಡಿ, ಕುಟ್ಟಿನೋಪಿನಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹಂಝ ಉಜ್ರೋಡಿ, ಜಮಾಅತ್ ಸದಸ್ಯರಾದ ಕೆ.ಪಿ ಇಬ್ರಾಹಿಂ ಉಜ್ರೋಡಿ, ಇಬ್ರಾಹಿಂ ಬಾಳಯ, ರೋಯಲ್ ಗ್ರೂಪ್‌ನ ಅಶ್ರಫ್ ಮುಳಿಯಡ್ಕ, ಎಸ್ಸೆಸ್ಸೆಫ್ ಅಧ್ಯಕ್ಷ ಜಮಾಲುದ್ದೀನ್ ಎನ್.ಕೆ ಉಪಸ್ಥಿತರಿದ್ದರು. ನಂತರ ನಡೆದ ಇಫ್ತಾರ್ ಸಂಗಮದಲ್ಲಿ ಊರ ಹಾಗೂ ಪರವೂರ ನೂರಾರು ಮಂದಿ ಭಾಗವಹಿಸಿದ್ದರು. ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಕಾರ್ಯಕರ್ತರು ಸಹಕರಿಸಿದರು. ಎಸ್‌ವೈಎಸ್ ಅಧ್ಯಕ್ಷ ಮಹಮ್ಮದ್ ಕೆ.ಎ ಸ್ವಾಗತಿಸಿ, ಹಾರಿಸ್ ಅಡ್ಕ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.