HomePage_Banner
HomePage_Banner
HomePage_Banner

ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ

Puttur_Advt_NewsUnder_1
Puttur_Advt_NewsUnder_1

ನಾವು ಇಂದು ಹಸಿರು ಪರಿಸರ ಸಂರಕ್ಷಣೆ ಮಾಡ ಬೇಕಾದ ಅವಶ್ಯಕತೆ ಇದೆ– ಕವಿತಾ ವಸಂತ್

ನಿಡ್ಪಳ್ಳಿ; ಬರಗಾಲ ಬರಲು ಕಾಡು ಕಣ್ಮರೆಯಾಗುತ್ತಿರುವುದು ಮುಖ್ಯ ಕಾರಣವಾಗುತ್ತಿದ್ದು ಇಂದು ಪರಿಸರ ಸಂರಕ್ಷಣೆ ಮಾಡ ಬೇಕಾದ ಅವಶ್ಯಕತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಟ್ಟಂಪಾಡಿ ವಲಯದ ಮೆಲ್ವೀಚಾರಕಿ ಕವಿತಾ ವಸಂತ ನುಡಿದರು.
ಅವರು ಜೂ.೨ ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆದ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಸದಸ್ಯರಿಗೆ ಮಾಹಿತಿ ನೀಡಿ ಮಾತನಾಡಿ ಈ ವರ್ಷ ಜೂನ್ ತಿಂಗಳು ಬಂದರೂ ಮಳೆ ಬಾರದೆ ನಮಗೆ ಬಹಳ ಸಂಕಷ್ಟ ಎದುರಾಗಿದ್ದು ಇದಕ್ಕೆ ಕಾಡು ಬರಿದಾಗುತ್ತಿರುವುದು ಕಾರಣ ಎಂದು ಅಭಿಪ್ರಾಯ ಪಟ್ಟ ಅವರು ಪರಿಸರ ಸ್ನೇಹಿ ಸಾಲು ಮರ ತಿಮ್ಮಕ್ಕರನ್ನು ಉದಾಹರಣೆ ನೀಡಿ ಪ್ರತಿಯೊಬ್ಬರೂ ಗಿಡ ನೆಡುವುದರೊಂದಿಗೆ ಬೀಜದುಂಡೆ ಮಾಡುವ ಬಗ್ಗೆಯೂ ತಿಳಿಸಿ, ವಿವಿಧ ಬಗೆಯ ಸಸಿ ನೆಡಲು ಯೋಜನೆ ಕೂಡ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿ ವಿವಿದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.


ಸೇವಾ ಪ್ರತಿನಿಧಿ ಪದ್ಮಾವತಿ. ಡಿ ವಿವಿಧ ಸವಲತ್ತು ಹಾಗೂ ತಂಡಗಳ ಕಾರ್ಯ ನಿರ್ವಹಣೆ ಉತ್ತಮ ರೀತಿಯಲ್ಲಿ ಮಾಡುವಂತೆ ತಿಳಿಸಿದರು. ಶ್ರೀ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಲಹೆಗಾರ ರಾಧಾಕೃಷ್ಣ ಪಾಟಾಳಿ ಕಳೆದ ಪೂಜೆಯ ಜಮೆ ಖರ್ಚುಗಳ ವಿವರ ನೀಡಿದರು. ಒಕ್ಕೂಟದ ವತಿಯಿಂದ ದೇವಸ್ಥಾನಕ್ಕೆ ಕೊಡುಗೆ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ನವೀನ ಕುಮಾರ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ಕೇವಲ ಸಾಲಕ್ಕಾಗಿ ಅಲ್ಲ ಒಕ್ಕೂಟ ಸಭೆಗೆ ಎಲ್ಲಾ ತಂಡಗಳ ಸರ್ವ ಸದಸ್ಯರು ಹಾಜರಾಗಿ ಯೋಜನೆಯ ಮಾಹಿತಿ ತಿಳಿದುಕೊಂಡು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುವಂತೆ ವಿನಂತಿಸಿದರು. ಒಕ್ಕೂಟದ ಪದಾಧಿಕಾರಿ ನಾರಾಯಣ ಮೂಲ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶಾಸ್ತಾರ ತಂಡದ ಮಂಜುನಾಥ ರೈ ಸ್ವಾಗತಿಸಿ, ಕಾರ್ಯದರ್ಶಿ ಶಾಲಿನಿ.ಕೆ ಒಕ್ಕೂಟದ ವರದಿ ವಾಚಿಸಿದರು. ಪದಾಧಿಕಾರಿ ಹರಿಪ್ರಸಾದ್ ಸಿ.ಎಚ್ ವಂದಿಸಿ, ಸುಮ.ಬಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.