ಬೆಳ್ತಂಗಡಿ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಮೋಕ್ಷ ಕಲ್ಯಾಣದ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನ

0

ಬೆಳ್ತಂಗಡಿ: ಇಲ್ಲಿಯ  ಶ್ರೀ ರತ್ನಾತ್ರಯ ಜೈನ ತೀರ್ಥಕ್ಷೇತ್ರದ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಸಮುಚ್ಚಯದಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಮೋಕ್ಷ ಕಲ್ಯಾಣದ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಸದಿಯ ವ್ಯಾಪ್ತಿಗೊಳಪಟ್ಟ ಎಲ್ಲಾ ಶ್ರಾವಕ ಶ್ರಾವಕಿಯರು ಭಾಗವಹಿಸಿ ಭಗವಾನ್ ಶ್ರೀ ಮಹಾವೀರ ಸ್ವಾಮಿಗೆ ಅರ್ಘ್ಯ ಎತ್ತುವ ಕಾರ್ಯವನ್ನು ಭಕ್ತಿ ಪ್ರಧಾನತೆಯಿಂದ ಅ.25ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ದಿನದ ಮಹತ್ವವನ್ನು ಸವಿವರವಾಗಿ ಬಸದಿಯ ಪ್ರಧಾನ ಪುರೋಹಿತರಾದ ಜಯರಾಜ್ ಇಂದ್ರ ಇವರು ವಿವರಿಸಿದರು.

LEAVE A REPLY

Please enter your comment!
Please enter your name here