ಜೆಸಿಐ ವಲಯ ಮಧ್ಯಂತರ ಸಮಾವೇಶ – ಮುಂಗಾರು 2019

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಯುವಜನತೆಗೆ ಮಾರ್ಗದರ್ಶನ ನೀಡುವಲ್ಲಿ ಜೆಸಿಐ ಮುಂಚೂಣಿ – ಸುಕುಮಾರ್
ಯುವಕರ ಪ್ರೇರಣೆಯ ನಾಯಕತ್ವ ಯಶಸ್ವಿಗೆ ದಾರಿ – ಅಶೋಕ್ ಚೂಂತಾರ್

ಪುತ್ತೂರು: ೨೧ನೇ ಶತಮಾನದ ಜನತೆ ಎಲ್ಲಾ ರೀತಿಯಲ್ಲೂ ಮುಂದಿದ್ದಾರೆ. ಆದರೂ ೧೮ ರಿಂದ ೪೦ ಯುವಜನತೆಯ ಪ್ರಾಮುಖ್ಯ ಘಟ್ಟ. ಇಂತಹ ಸಂದರ್ಭದಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ಅಂತಹ ಕಾರ್ಯ ಮಾಡುವಲ್ಲಿ ಜೆಸಿಐ ಮುಂಚೂಣಿಯಲ್ಲಿದೆ ಎಂದು ಜೆಸಿಐ ಇಂಡಿಯಾ ಫೌಂಡೇಶನ್‌ನ ನಿರ್ದೇಶಕ ವೈ ಸುಕುಮಾರ್ ಅವರು ಹೇಳಿದರು. ಪುತ್ತೂರು ಜೆಸಿಐ ಆತಿಥ್ಯದಲ್ಲಿ ಕೊಂಬೆಟ್ಟು ಸುಂದರಾಮ್ ಸ್ಮಾರಕ ಬಂಟರ ಭವನದಲ್ಲಿ ಜೂ. ೨ರಂದು ದಕ್ಷಿಣ, ಉತ್ತರ ಕನ್ನಡ ಸೇರಿದಂತೆ ೭ ಪ್ರಾಂತಗಳು, ಒಂದು ವಲಯ ಮತ್ತು ೯೦ಕ್ಕೂ ಅಧಿಕ ಘಟಕಗಳನ್ನೊಳಗೊಂಡು ನಡೆದ ಮಧ್ಯಂತರ ಸಮಾವೇಶ ಮುಂಗಾರು -೨೦೧೯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.

ಯುವಕರ ಪ್ರೇರಣೆಯ ನಾಯಕತ್ವ ಯಶಸ್ವಿಗೆ ದಾರಿ: ಮುಂಗಾರು ಸಮಾವೇಶ ಉದ್ಘಾಟಿಸಿದ ಜೆಸಿಐ ವಲಯ ಅಧ್ಯಕ್ಷ ಅಶೋಕ್ ಚೂಂತಾರ್ ಅವರು ಮಾತನಾಡಿ ಎಲ್ಲಾ ರಾಷ್ಟ್ರೀಯ ಮಟ್ಟದಲ್ಲಿ ವಲಯ ಉತ್ತುಂಗಕ್ಕೆ ಏರಲು ಅವಕಾಶ ಸಿಕ್ಕಿದೆ. ಯುವಕರ ಪ್ರೇರಣೆಯೆಂಬ ನಾಯಕತ್ವ ಯಶಸ್ವಿಗೆ ದಾರಿಯಾಗಿದೆ ಎಂದು ಅವರು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯದ ಎ ಘಟಕದ ಅಬ್ದುಲ್ ಜಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವುಡ, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಮುರಳಿಶ್ಯಾಮ್, ಆತಿಥೇಯ ಘಟಕಗಳಾದ ಸಮಂತ್ ಆಳ್ವ, ಶಶಿರಾಜ್, ಶ್ವೇತಾ ಕಿರಣ್, ಪ್ರಶಾಂತಿ ಶರ್ಮ, ಸ್ಮಿತಾ ಹೊಳ್ಳ, ಗಣೇಶ್, ರಾಜೇಶ್ ಭಟ್, ಗಿರೀಶ್, ಪ್ರದೀಪ್ ಬೇಕಲ್, ಕುಂದಾಪುರದ ಜಯಚಂದ್ರ ಶೆಟ್ಟಿ, ಕಾರ್ಕಳದ ರೋಶ್ ಮಿಲ್ಲೊ, ಸುಬ್ರಹ್ಮಣ್ಯದ ರವಿ, ಶಂಕರಾಪುರದ ಸಂತೋಷ್ ಕುಮಾರ್, ಮಂಳೂರಿನ ಅಬ್ದುಲ್ ಅಝೀಜ್, ನೆಕ್ಕಿಲಾಡಿಯ ಶಿವಕುಮಾರ್, ಹೆಬ್ರಿಯ ವೀಣಾ ಆರ್ ಭಟ್, ವಿಟ್ಲದ ಬಾಬು ಕೆ.ವಿ, ಮುಲ್ಕಿಯ ಮಲ್ಲಿಕಾರ್ಜುನ, ಪರ್ಕಳದ ಆಶಾ ಬಾಬು, ಮುಲ್ಕಿಯ ಶಾಂಂಭವಿ, ಸಸ್ತಾನದ ಕೇಶವ ಆಚಾರ್, ಮೂಡಬಿದ್ರೆಯ ಸಂತೋಷ್ ರೆಡ್ಡಿ, ಶಿರೂರ್ ಗ್ರಾಮಾಂತರದ ಅರುಣ್ ಕುಮಾರ್, ಉಡುಪಿಯ ಸುನಿಲ್ ಬಂಗೇರ, ಪುತ್ತೂರಿನ ಪುರುಷೋತ್ತಮ ಶೆಟ್ಟಿ, ಉಡುಪಿ ಇಂದ್ರಾಳಿಯ ಸಿರಿಲ್ ಮನೋಜ್, ಉಡುಪಿ ಸಿಲ್ವರ್‌ಸ್ಟಾರ್ ರಮಾನಾಥ ಶೆಟ್ಟಿ, ಕೋಣಾಜೆಯ ಬಾದ್‌ಶಾ, ಕಲ್ಯಾಣಪುರದ ಶ್ರೀನಿವಾಸ್ ಜಿ, ಚಿತ್ತೂರಿನ ನಾಗೇಂದ್ರ ಆಚಾರ್ಯ, ಸುಳ್ಯದ ಮನಮೋಹನ್, ಕಾರ್ಕಳ ಗ್ರಾಮಾಂತರದ ಸಂತೊಷ್ ಪೂಜಾರಿ, ಮಂಗಳೂರಿನ ರಕ್ಷಿತ್, ಬೆಲ್‌ಮನ್‌ನ ಸರ್ವಜ್ಞ ತಂತ್ರಿ, ಮೂಡಬಿದ್ರೆಯ ಸಂಗೀತ ಪ್ರಭು, ಮಡಂತ್ಯಾರಿನ ರಾಜೇಶ್, ಬೆಳ್ಮನ್‌ನ ಸುಭಾಶ್ ಕುಮಾರ್, ಬೆಳ್ತಂಗಡಿಯ ಚಿದಾನಂದ ಇಡ್ಯ, ಮಂಗಳೂರು ರಾಘವೇಂದ್ರ ಹೊಳ್ಳ, ಕಾಪುವಿನ ಸೌಮ್ಯ ರಾಕೇಶ್, ಕುಂದಾಪುರದ ಅಕ್ಷತಾ ಗಿರೀಶ್, ಉಪ್ಪಿನಂಗಡಿಯ ಪ್ರಶಾಂತ್ ಕುಮಾರ್, ಉಡುಪಿ ಸಿಟಿಯ ರಾಘವೇಂದ್ರ ಪ್ರಭು, ಮಂಗಳೂರು ಲಾಲ್‌ಬಾಗ್‌ನ ಸೌಜನ್ಯ ಹೆಗ್ಡೆ, ಪುತ್ತೂರು ವಲಯ ಉಪಾಧ್ಯಕ್ಷ ದಾಮೋದರ್ ಪಾಟಾಳಿ, ಸುಳ್ಯದ ರೋಯನ್ ಉದ್ಯಾ ಕ್ರಾಸ್ತ, ಪಡುಬಿದ್ರೆಯ ಮಕರಂದ ಸಾಲ್ಯಾನ್, ಮಡಂತ್ಯಾರಿನ ಜಯೇಶ್ ಬ್ರಿಟ್ಟೊ, ಕುಂದಾಪುರದ ಕಾರ್ತಿಕೇಯ, ಪರ್ಕಳದ ದೇವೇಂದ್ರ ನಾಯಕ್, ಕಾಪು ರಾಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಂದರ್ ಶಾಫಿ ಮತ್ತು ಸ್ವಾತಿ ರೈ ಅತಿಥಿಗಳನ್ನು ಪರಿಚಯಿಸಿದರು. ವರ್ಷ ಪ್ರಾರ್ಥಿಸಿದರು. ಜೆಸಿಐ ಪುತ್ತೂರು ಅಧ್ಯಕ್ಷ ಗೌತಮ್ ರೈ ಸ್ವಾಗತಿಸಿ, ಕಾನ್ಫರೆನ್ಸ್ ನಿರ್ದೇಶಕ ಪಶುಪತಿ ಶರ್ಮ ವಂದಿಸಿದರು. ಇತ್ತೀಚೆಗೆ ಶಬರಿಮಲೆಯಲ್ಲಿ ಮೃತಪಟ್ಟ ಜೆಸಿಐ ಸದಸ್ಯ ಜನಾರ್ದನ ಗೌಡ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಉದ್ಘಾಟನಾ ಸಮಾರಂಭ ಮುಗಿದ ಬಳಿಕ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಅವರು ಮುಖ್ಯ ಭಾಷಣ ಮಾಡಿದರು.

ವಿವಿಧ ಸ್ಪರ್ಧಾ ಕಾರ್ಯಕ್ರಮ, ಪ್ರಶಸ್ತಿ ವಿತರಣೆ:
ಕಾರ್ಯಕ್ರಮದಲ್ಲಿ ಮಧ್ಯಾಹ್ನದ ವೇಳೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ವಿವಿಧ ಘಟಕಗಳ ಪದಾಧಿಕಾರಿಗಳು ತಮ್ಮ ತಮ್ಮ ವಲಯದಲ್ಲಿ ಜೂನ್ ತಿಂಗಳಲ್ಲಿ ನಡೆಸಲ್ಪಡುವ ಕಾರ್ಯಕ್ರಮದ ಬ್ಯಾನರ್ ಅನಾವರಣ, ಪತ್ರಿಕೆ ಅನಾವರಣ ನಡೆಯಿತು. ಸಭಾಂಗಣದ ಹೊರಗೆ ಸೆಲ್ಫಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಜೆಸಿಐಗೆ ಹೆಚ್ಚಿನ ಅನುದಾನ ಸಂಗ್ರಹಿಸಿ ಕೊಟ್ಟ ಘಟಕಾಧ್ಯಕ್ಷರನ್ನು ಗುರುತಿಸಿ ಚಿಗುರುತಾರೆ ಪುರಸ್ಕಾರ ಮತ್ತು ರಾಜರಾಣಿ ಪುರಸ್ಕಾರ ವಿತರಣೆ ನಡೆಯಿತು. ಸಮಾರಂಭದಲ್ಲಿ ಭಾಗವಹಸಿದ ಎಲ್ಲರಿಗೂ ರಕ್ತ ಛಂದನ ಮತ್ತು ಬಿಲ್ವ ಪತ್ರೆಯ ಗಿಡಗಳನ್ನು ಉಚಿತವಾಗಿ ವಿತರಣೆಯೂ ನಡೆಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.