ಗಡಾಯಿಕಲ್ಲು ಕೋಟೆಯ ಸಂದರ್ಶನಕಾರರ ವಿಚಾರಣೆ ಕೊಠಡಿ ಬಳಿ ಸಿ.ಸಿ ಟಿ.ವಿ ಅಳವಡಿಸುವಂತೆ ಲಾಯಿಲ ಮಾಜಿ ತಾ.ಪಂ ಸದಸ್ಯರಾದ ಸುಧಾಕರ್ ಬಿ.ಎಲ್ ಸಂಬಂಧಪಟ್ಟ ಇಲಾಖೆಗೆ ಮನವಿ

0

ಬೆಳ್ತಂಗಡಿ: ತಾಲೂಕಿನ ಐತಿಹಾಸಿಕ ಸ್ಥಳವಾದ ಗಡಾಯಿಕಲ್ಲು ಕೋಟೆಗೆ ಈಗಾಗಲೇ ರಾಜ್ಯದ ನಾನಾ ಕಡೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಬರುವ ಸಂದರ್ಶನಕಾರರ ಸರಿಯಾದ ವಿಳಾಸವನ್ನು ಆಧಾರ್ ಪರಿಶೀಲಿಸಿ ನೋಂದಣಿ ಪುಸ್ತಕದಲ್ಲಿ ಸ್ವತ ಇಲಾಖೆಯ ವತಿಯಿಂದ ನೇಮಿಸಲ್ಪಟ್ಟ ವ್ಯಕ್ತಿಯೇ, ಬರೆಯುವಂತೆ ಮತ್ತು ನೀಡಿದ ಮೊಬೈಲ್ ನಂಬರ್ ಧೃಡೀಕರಿಸಿ ಕೋಟೆಯ ಮೇಲೆ ಹೋಗುವ ಸಂದರ್ಶನಕಾರರ ಸಂಖ್ಯೆ ಪಡೆದು ಶುಲ್ಕ ಪಾವತಿ ರಶೀದಿ ಕಡ್ಡಾಯ ನೀಡಿ , ಕೋಟೆ ಸಂದರ್ಶನಕ್ಕೆ ಅವಕಾಶ ನೀಡಬೇಕಿದ್ದು, ಸಂದರ್ಶನಕಾರರ ಹಿತ ದೃಷ್ಟಿಯಿಂದ ಕೂಡಲೇ ಈ ಬಗ್ಗೆ ಇಲಾಖೆ ಕಟ್ಟುನಿಟ್ಡಿನ ಕ್ರಮ ಕೈಗೊಳ್ಳುವುದರ ಜೊತೆ ಇಲಾಖೆ ವತಿಯಿಂದ ಸಂದರ್ಶನಕಾರರ ವಿಚಾರಣೆ ಕೊಠಡಿ ಬಳಿ ಸಿ.ಸಿ ಟಿ.ವಿ ಅಳವಡಿಸುವಂತೆ ಲಾಯಿಲ ಮಾಜಿ ತಾ.ಪಂ ಸದಸ್ಯರಾದ ಸುಧಾಕರ್ ಬಿ.ಎಲ್ ರವರು ವನ್ಯ ಜೀವಿ ವಿಭಾಗದ ವಲಯಾರಣ್ಯಾಧಿಕಾರಿಗಳನ್ನು ಭೇಟಿ ಮಾಡಿ ,ವಿಚಾರವನ್ನು ತಿಳಿಸಿ ತದನಂತರ ಅವರ ಅನುಪಸ್ಥಿತಿಯಲ್ಲಿ ಮನವಿಯನ್ನು ಕಛೇರಿ ಸಿಬ್ಬಂದಿಯಲ್ಲಿ ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ವಿಚಾರದಲ್ಲಿ ಅಲ್ಲಿ ಅಷ್ಟೊಂದು ಮುತುವರ್ಜಿ ವಹಿಸದ ಕಾರಣ ಏನಾದರೂ ಅನಾಹುತಗಳು ನಡೆದಲ್ಲಿ ಇದರ ಜವಬ್ದಾರಿ ಇಲಾಖೆ ವಹಿಸಿಕೊಳ್ಳಬೇಕಾಗಿರುವುದರಿಂದ ಇಲಾಖೆಯು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಲಾಯಿಲ ಗ್ರಾಮದ ನಾಗರೀಕರಾದ ದೇವರಾಜ್ ಜೊತೆಗಿದ್ದರು.

LEAVE A REPLY

Please enter your comment!
Please enter your name here