HomePage_Banner
HomePage_Banner
HomePage_Banner

ಚಿಕ್ಕಮುಡ್ನೂರು ಬಿಲ್ಲವ ಗ್ರಾಮ ಸಮಿತಿ ಮಹಾಸಭೆ, ಉಚಿತ ಪುಸ್ತಕ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಗ್ರಾಮ ಸಮಿತಿ ಚಿಕ್ಕಮುಡ್ನೂರು ಇದರ ವತಿಯಿಂದ ಜೂ. 2 ರಂದು ಬೀರ್ನಹಿತ್ಲು ಚಿಕ್ಕಮುಡ್ನೂರು ಶಾಲೆಯಲ್ಲಿ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ ದೀಪಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮವು ಚಿಕ್ಕಮುಡ್ನೂರು ಗ್ರಾಮ ಸಮಿತಿ ಅಧ್ಯಕ್ಷ ಅಣ್ಣಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.

ವೇದಿಕೆಯಲ್ಲಿ ಗುರುಮಂದಿರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್ ಸಿ ನಾರಾಯಣ್, ವಲಯ ಸಂಚಾಲಕ ಉಲ್ಲಾಸ್ ಕೋಟ್ಯಾನ್, ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ಪೂಜಾ ವಸಂತ್, ಕೇಂದ್ರ ಯುವವಾಹಿನಿ ಘಟಕದ ಸಮಾವೇಶ ನಿರ್ದೇಶಕ ಶಶಿಧರ ಕಿನ್ನಿಮಜಲು, ಚಿಕ್ಕಮುಡ್ನೂರು ದೇಯಿಬೈದೆತಿ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಗೀತಾ ಗಂಗಾಧರ್ ಅನಂತಿಮಾರು, ಬನ್ನೂರು ಗ್ರಾ.ಪಂ ಸದಸ್ಯೆ ಗೀತಾ ಪುರುಷೋತ್ತಮ ಉಪಸ್ಥಿತರಿದ್ದರು.

ಪುಸ್ತಕ ವಿತರಣೆ: ಅಂಗನವಾಡಿಯಿಂದ ಪದವಿ ತನಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ನಿಶ್ಮಿತಾ ಅನಂತಿಮಾರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಪದಾಧಿಕಾರಿಗಳ ಆಯ್ಕೆ: ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ  ಮಾಡಲಾಯಿತು.  ಸಮಿತಿಯ ಅಧ್ಯಕ್ಷರಾಗಿ ಅಣ್ಣಿ ಪೂಜಾರಿ ಅನಂತಿಮಾರು, ಉಪಾಧ್ಯಕ್ಷರಾಗಿ ಭಾಸ್ಕರ ಪೂಜಾರಿ ತುಂಬೆದಡ್ಕ, ಕಾರ್ಯದರ್ಶಿಯಾಗಿ ನಿಸ್ಚಿತಾ ಕುಮಾರಿ ಆಯ್ಕೆಯಾದರು.

ಚಿಕ್ಕಮುಡ್ನೂರು ಬಿಲ್ಲವ ಗ್ರಾಮ ಸಮಿತಿಯ ಸದಸ್ಯ ಭಾಸ್ಕರ ಪೂಜಾರಿ ಅನಂತಿಮಾರು ಅತಿಥಿಗಳಿಗೆ ಶಾಲು ನೀಡಿ ಗೌರವಿಸಿದರು.

ದೀಕ್ಷಾ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 2019-20 ರ ಸಾಲಿನ ಬಿಲ್ಲವ ಗ್ರಾಮ ಸಮಿತಿ ಹಾಗು  ದೇಯಿಬೈದೇತಿ ಮಹಿಳಾ ಬಿಲ್ಲವ ಗ್ರಾಮ ಸಮಿತಿಯ ವರದಿಯನ್ನು ಸುಷ್ಮಾ ವಾಚಿಸಿದರು. ನಿಶ್ಚಿತಾ ಕುಮಾರಿ ಅಡ್ಲಿಮಜಲು ಧನ್ಯವಾದ ಸಮರ್ಪಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಆಶಾಕಾರ್ಯಕರ್ತೆ ಸಂಧ್ಯಾ, ಲಿಖಿತ್ ಹಾಗೂ ಸಂಘದ ಸದಸ್ಯರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.