Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ: ಜಿ.ಎಸ್.ಬಿ. ಸಮಾಜದ ಉದ್ಯಮಿಯಿಂದ ಇಫ್ತಾರ್ ಕೂಟ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉದ್ಯಮಿಯೋರ್ವರು ಉಪ್ಪಿನಂಗಡಿಯ ಮುಸ್ಲೀಂ ಸಮಾಜಕ್ಕೆ ಇಫ್ತಾರ್ ಕೂಟ ಆಯೋಜಿಸಿ ಸ್ನೇಹ-ಪ್ರೇಮ-ಬ್ರಾತೃತ್ವದ ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.

ಉಪ್ಪಿನಂಗಡಿಯ ರಥ ಬೀದಿ ನಿವಾಸಿ, ಉದ್ಯಮಿ ಜಗದೀಶ್ ಶೆಣೈ ಇಫ್ತಾರ್ ಕೂಟವನ್ನು ಆಯೋಜಿಸಿದವರು. ತನ್ನ ಸಹೋದರನ ಮಗಳ ಮದುವೆ ಸಮಾರಂಭಕ್ಕೆ ಆಗಮಿಸಿದ ಮುಸ್ಲಿಂ ಸ್ನೇಹಿತರು ರಂಜಾನ್ ಉಪವಾಸದ ನಿಮಿತ್ತ ಆತಿಥ್ಯ ಸ್ವೀಕರಿಸದೆ ಹಿಂತಿರುಗಿರುವುದನ್ನು ಕಂಡ ಜಗದೀಶ್ ಶೆಣೈಯವರು ಮುಸ್ಲೀಂ ಸಮಾಜದಲ್ಲಿನ ಸ್ನೇಹಿತರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿ ಸೌಹಾರ್ದತೆ ಮೆರೆದಿದ್ದಾರೆ.

ಸಮಾಜದಲ್ಲಿನ ಸಾಮರಸ್ಯಕ್ಕೆ ಪ್ರೇರಣೆ ನೀಡುವ ಇಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ ಉಪ್ಪಿನಂಗಡಿಯ ಮಾಲಿಕುದ್ದೀನಾರ್ ಜುಮ್ಮಾ ಮಸೀದಿಯ ಆಡಳಿತ ಮಂಡಳಿ ಇಫ್ತಾರ್ ಕೂಟ ಆಯೋಜಿಸಲು ಒಪ್ಪಿಗೆ ನೀಡಿದೆ. ಈ ಹಿಂದೆ ಈ ಮಸೀದಿ ಪುನರ್ ನಿರ್ಮಾಣಗೊಂಡು ಲೋಕಾರ್ಪಣೆಗೊಂಡ ಸಂಧರ್ಭದಲ್ಲೂ ಮಸೀದಿಯ ಅಡಳಿತ ಮಂಡಳಿಯು ಆಮಂತ್ರಿಸಲ್ಪಟ್ಟ ಹಿಂದೂ ಬಾಂಧವರಿಗಾಗಿ ಸಾದ್ವಿಷ್ಠ ಸಸ್ಯಾಹಾರದ ಆತಿಥ್ಯವನ್ನು ನೀಡಿ ಗಮನ ಸೆಳೆದಿತ್ತು.

ಪ್ರೇರಣೀಯ ಕಾರ್ಯಕ್ರಮ-ಹಾಜಿ ಮುಸ್ತಾಫ ಕೆಂಪಿ
ಜಗದೀಶ್ ಶೆಣೈಯವರು ಸ್ವಯಂಪ್ರೇರಿತರಾಗಿ ನೀಡಿರುವ ಇಪ್ತಾರ್ ಕೂಟ ಸಂತಸ ತಂದಿದೆ. ಪ್ರತಿಯೊಂದು ಧಾರ್ಮಿಕ ಕೇಂದ್ರಗಳಲ್ಲಿ ಮನಸ್ಸನ್ನು ಅರಳಿಸಿ ಭಾಂಧವ್ಯವನ್ನು ಬೆಸೆಯುವ ಕಾರ್ಯಗಳಾದಾಗ ಉತ್ತಮ ಸಮಾಜ ರೂಪುಗೊಳ್ಳಲು ಪ್ರೇರಣೆ ದೊರಕಬಹುದು ಎಂದು ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.