HomePage_Banner
HomePage_Banner
HomePage_Banner

ಶಸ್ತ್ರಚಿಕಿತ್ಸೆಗೂ ಮೊದಲು ನಿಮ್ಮ ಜಾತಿ ಹೇಳಿ, ಇಲ್ಲದಿದ್ದರೆ ಜೀವಕ್ಕೇ ಅಪಾಯ !

Puttur_Advt_NewsUnder_1
Puttur_Advt_NewsUnder_1


ಶಾಲೆಗೆ ಸೀಟ್, ಸರ್ಕಾರಿ ಕೆಲಸ ಎಲ್ಲಾ ಕಡೆ ಬರೀ ಜಾತಿಯದ್ದೇ ಕಾರುಬಾರು. ನಿಮ್ಮ ಜಾತಿಯನ್ನು ಹೇಳಲೇಬೇಕು. ಇಷ್ಟೇ ಅಲ್ಲ ನಿಮಗೆ ಒಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿಮ್ಮ ಜಾತಿ ಯಾವುದು ಎಂದು ವೈದ್ಯರಿಗೆ ಹೇಳಲೇ ಬೇಕು, ಇಲ್ಲದಿದ್ದರೆ ಜೀವಕ್ಕೆ ಅಪಾಯ ಬಂದುಬಿಡಬಹುದಂತೆ ! ಯಾಕೆ ಅಂತೀರಾ ? ಅಂದ ಹಾಗೆ ಇದು ಸರ್ಕಾರ ಮಾಡಿರುವ ಹೊಸ ನಿಯಮ ಅಲ್ಲ. ನೀವು ಯಾವುದೇ ಮೇಜರ್ ಅಥವಾ ಮೈನರ್ ಸರ್ಜರಿ ಇದ್ದರೂ ಸರಿ ವೈದ್ಯರಿಗೆ ನಿಮ್ಮ ಜಾತಿಯನ್ನು ಹೇಳಲೇಬೇಕು, ಈ ವಿಚಾರ ಬೇರೆಯವರಿಗಿಂತ ಹೆಚ್ಚಾಗಿ ಆರ್ಯ ವೈಶ್ಯ ಸಮುದಾಯದವರಿಗೆ ಅನ್ವಯವಾಗುತ್ತದೆ. ಏಕೆಂದರೆ ರೋಗಿಗಳಿಗೆ ಶಸ್ತ್ರಚಿಕಿತ್ಸೆ ವೇಳೆ ಕೊಡುವ ಅನಸ್ತೇಶಿಯಾ ವೈಶ್ಯ ಸಮುದಾಯದವರ ಮೇಲೆ ಬೇರೆಯ ರೀತಿ ಕೆಲಸ ಮಾಡುತ್ತದೆಯಂತೆ ! ಆರ್ಯ ವೈಶ್ಯ ಸಮುದಾಯದವರ ಜೀನ್‌ನಲ್ಲಿ ಇರುವ ಒಂದಷ್ಟು ಬದಲಾವಣೆಗಳಿಂದಾಗಿ ಅವರಿಗೆ ಎನ್‌ಜೈಮ್ ಕೊರತೆ ಇರುತ್ತದೆ. ಇದರಿಂದಾಗಿ ಸಾಮಾನ್ಯರಿಗೆ ಶಸ್ತ್ರಚಿಕಿತ್ಸೆ ಮುಗಿದ ಒಂದೆರಡು ಗಂಟೆಯಲ್ಲಿ ಪ್ರಜ್ಞೆ ಬಂದರೆ, ಆರ್ಯ ವೈಶ್ಯರಿಗೆ 2 ರಿಂದ 8 ಗಂಟೆಗಳವರೆಗೂ ಪ್ರಜ್ಞೆ ಬರುವುದಿಲ್ಲ. ಅಲ್ಲಿವರೆಗೂ ಅವರನ್ನು ವೆಂಟಿಲೇಟರ್‌ನಲ್ಲೇ ಇಟ್ಟಿರಬೇಕು. ಅದಕ್ಕಾಗಿ ನೀವು ಶಸ್ತ್ರಚಿಕಿತ್ಸೆಗೂ ಮೊದಲು ವೈದ್ಯರಿಗೆ ನಿಮ್ಮ ಜಾತಿ ಹೇಳಬೇಕಾಗಿ ಎನ್ನುತ್ತಾರೆ ಎಂ.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.