HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅಸಂಘಟಿತ ಕಾರ್ಮಿಕರು ಸೇರಿದಂತೆ 91 ವೃತ್ತಿದಾರರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ತಾಲೂಕು ಕೇಂದ್ರದಲ್ಲಿ ಆರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಶೀಘ್ರದಲ್ಲೇ ತಾಲೂಕು ಕೇಂದ್ರಗಳಲ್ಲಿ ಆರಂಭಗೊಳ್ಳಲಿದ್ದು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ 91 ವೃತ್ತಿದಾರರಿಗೆ ಈ ವಿಮಾ ಯೋಜನೆ ಸಿಗಲಿದೆ. ಇದೊಂದು ಪಾಲಿಸಿದಾರರ ಪಾಲಿಗೆ ಉಚಿತ ವಿಮಾ ಯೋಜನೆ ಎಂದು ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರು ತಿಳಿಸಿದ್ದಾರೆ.

ಈಗಾಗಲೇ 91 ವೃತ್ತಿದಾರರ ಪಟ್ಟಿಯನ್ನು ಕೇಂದ್ರ ಸರಕಾರ ರಚನೆ ಮಾಡಿದ್ದು, ಆ ಪಟ್ಟಿಯ ವಿವರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪಟ್ಟಿಯಲ್ಲಿರುವ ಕಾರ್ಮಿಕರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಮುಂದಿನ ವಾರದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅವರು ಹೇಳಿದರು. ಕುಟುಂಬದ ಯಜಮಾನ ಮಾತ್ರ ಪಾಲಿಸಿದಾರನಾಗಲು ಅರ್ಹತೆ ಪಡೆದಿದ್ದು, ಆತನಿಗೇನಾದರೂ ಆಕಸ್ಮಿಕ ಸಾವು ಉಂಟಾದಲ್ಲಿ ನಾಮಿನಿಯ ಖಾತೆಗೆ ಹಣ ಜಮಾವಣೆಯಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಪಾಲಿಸಿದಾರನಾಗಲು ಅರ್ಹತೆ:
ಯೋಜನೆಯ ಪಾಲಿಸಿದಾರನಾಗಲು ಕುಟುಂಬದ ಯಜಮಾನನಿಗೆ ಅವಕಾಶವಿದೆ. ಆತನ ವಯಸ್ಸು 18 ರಿಂದ 50 ವರ್ಷಗಳ ನಡುವಿರಬೇಕು. ಜೊತೆಗೆ ಆದಾಯ ಮಿತಿಯನ್ನು ಇರಿಸಲಾಗಿದ್ದು, ಗ್ರಾಮೀಣ ಪ್ರದೇಶಕ್ಕೆ ವಾರ್ಷಿಕ ರೂ. 12,000 ಮತ್ತು ನಗರ ಪ್ರದೇಶಕ್ಕೆ ರೂ. 17,000 ಇಡಿಸಲಾಗಿದೆ. ಅರ್ಜಿದಾರರು ಆದಾಯ ಪ್ರಮಾಣಪತ್ರ, ರೇಶನ್ ಕಾರ್ಡ್, ಆಧಾರ್ ಕಾರ್ಡ್, ನಾಮಿನಿಯ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ನಾಮಿನಿಯ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ಸಲ್ಲಿಸಬೇಕು. ವಯಸ್ಸಿನ ದೃಢೀಕರಣಕ್ಕಾಗಿ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ ಅಥವಾ ವೈದ್ಯರ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಆದಾಯ ಮಿತಿ ಹೆಚ್ಚಿಸಲು ಮನವಿ:
ಯೋಜನೆಗೆ ಸಂಬಂಧಿಸಿ ಇಟ್ಟಿರುವ ವಾರ್ಷಿಕ ಆದಾಯ ಮಿತಿಗಿಂತ ಹೆಚ್ಚಿನ ಆದಾಯದವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಆದರೆ ಇಷ್ಟೊಂದು ಕಡಿಮೆ ವಾರ್ಷಿಕ ಆದಾಯ ಮಿತಿ ಇರುವವರು ಪ್ರಸ್ತುತ ದಿನಗಳಲ್ಲಿ ಸಿಗುವುದು ಕಷ್ಟ. ಈ ನಿಟ್ಟಿನಲ್ಲಿ ಯೋಜನೆಗೆ ಫಲಾನುಭವಿಗಳು ಸಿಗುವುದು ಕಷ್ಟ ಎಂದು ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ಲಿಖಿತ ರೂಪದಲ್ಲಿ ಆಕ್ಷೇಪ ಸಲ್ಲಿಸಲು ತಿಳಿಸಿದ್ದಾರೆ. ಅದೇ ರೀತಿ ಆದಾಯ ಮಿತಿ ಹೆಚ್ಚಿಸುವಂತೆ ಕೋರಿ ಆಕ್ಷೇಪವನ್ನು ಸಲ್ಲಿಸಲಿದ್ದೇವೆ ಎಂದು ತಹಸೀಲ್ದಾರ್ ಡಾ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ರೂ. 2ಲಕ್ಷ ವಿಮಾ ಪರಿಹಾರ
ವಿಮಾ ಯೋಜನೆಯಲ್ಲಿ ರೂ. 2ಲಕ್ಷ ಪರಿಹಾರ ವಿಮಾ ಪರಿಹಾರ ಮೊತ್ತ ಸಿಗಲಿದೆ. ಪಾಲಿಸಿದಾರರು ಕಟ್ಟಬೇಕಾದ ವಿಮಾ ಕಂತಿನ ಹಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡು ಸೇರಿ ಕಟ್ಟಲಿವೆ. ಪಾಲಿಸಿದಾರರು ಅರ್ಜಿ ಸಲ್ಲಿಸಿದರೆ ಸಾಕು. ಇಲ್ಲಿ ಆಕಸ್ಮಿಕ ಸಾವಿಗೆ ವಾರೀಸುದಾರರಿಗೆ ರೂ. 2ಲಕ್ಷ ವಿಮಾ ಪರಿಹಾರ ಸಿಗಲಿದೆ. ವಿಮಾ ಯೋಜನೆಯನ್ನು ಎಲ್.ಐ.ಸಿ ಸಂಸ್ಥೆಯವರೇ ನಿರ್ವಹಿಸಲಿದ್ದಾರೆ – ಡಾ. ಪ್ರದೀಪ್ ಕುಮಾರ್  ತಹಶೀಲ್ದಾರ್ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.