Home_Page_Advt
Home_Page_Advt
Home_Page_Advt

ಬಡಗನ್ನೂರು: ಎ ಒಕ್ಕೂಟದ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಗ್ರಾಮೀಣ ಕುಟುಂಬಗಳ ಅಭಿವೃದ್ಧಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಅರಿಯಡ್ಕ ವಲಯ ಜನಜಾಗೃತಿ ವಲಯಾಧ್ಯಕ್ಷ ನಾರಾಯಣ ರೈ ಕುದ್ಕಾಡಿ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಇದರ ಮಾರ್ಗದರ್ಶನದಲ್ಲಿ  ನಡೆದ  ಬಡಗನ್ನೂರು   ಪ್ರಗತಿ ಬಂಧು ಸ್ವಸಹಾಯ ಸಂಘಗಳ  “ಎ ” ಒಕ್ಕೂಟದ  ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಂದ ನಂತರ  ಬಡ ಹಾಗೂ ಮಧ್ಯಮ ವರ್ಗದ ಜನರಿಗೂ ಬ್ಯಾಂಕ್ ವ್ಯವಹಾರ ಜ್ಞಾನ ಪಡೆದು  ತಮ್ಮ ಅಭಿರುಚಿಗೆ ತಕ್ಕಂತೆ ಸಾಲ ಪಡೆದು ಜೀವನ ಸಾಗಿಸಲು ಸಾಧ್ಯವಾಗಿದೆ.ಸಂಘದಲ್ಲಿ ಸದಸ್ಯರು ಪರಸ್ಪರ ಸಹಕಾರ ಮನೋಭಾವನೆಯಿಂದ  ಕೆಲಸ ಮಾಡುವುದರಿಂದ ಒಕ್ಕೂಟ ಉತ್ತಮವಾಗಿರಲು ಸಾಧ್ಯವಾಗಿದೆ. ಸದಸ್ಯರು ಉದ್ದೇಶ ಅನುಗುಣವಾಗಿ ಸಾಲ ಪಡೆದು ವಿನಿಯೋಗ ಮಾಡುವ ಮೂಲಕ ಬಾಳು ಬಂಗಾರವಾಗಿದೆ ಮುಂದೆ  ನೂತನ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸಹಕಾರ ನೀಡುವ ಮೂಲಕ ಒಕ್ಕೂಟವು ಒಂದು ಮಾದರಿ ಒಕ್ಕೂಟವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ತಾಲೂಕು ಕೃಷಿ ಅಧಿಕಾರಿ ಉಮೇಶ್ ಮಾತನಾಡಿ  ಜೀವನದಲ್ಲಿ  ಉತ್ತಮ ಕೆಲಸ ಮಾಡುವ ಮೂಲಕ ಸಾರ್ಥಕತೆ ಪಡೆಯಬೇಕು ಎಂದು ಹೇಳಿದರು. ಬಳಿಕ  ಯೋಜನೆ ಸೌಲಭ್ಯ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮವು ಒಕ್ಕೂಟದ ಅಧ್ಯಕ್ಷ ತ್ಯಾಂಪಣ್ಣ ಸಿ.ಯಚ್ ಇವರ ಅಧ್ಯಕ್ಷತೆಯಲ್ಲಿ  ಜೂ 2 ರಂದು  ಬಡಗನ್ನೂರು ಶಾಲಾಸಭಾಂಗಣದಲ್ಲಿ ನಡೆಯಿತು.

ದ.ಕ.ಜಿ.ಪಂಉ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ,  ತಾಲೂಕು ಭಜನಾ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ,  ನೂತನ ಒಕ್ಕೂಟದ ಅಧ್ಯಕ್ಷೆ ಸವಿತಾ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಒಕ್ಕೂಟದ  ಉಪಾಧ್ಯಕ್ಷೆ ಶ್ರೀಮತಿ, ಕೋಶಾಧಿಕಾರಿ ಯಾದವ ಹಾಗೂ ನೂತನ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಹಾಗೂ ಪ್ರಗತಿ ಬಂಧು ,ಸ್ವ- ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದರು.

ಸೇವಾ ಪ್ರತಿನಿಧಿ ಜಯಲಕ್ಷಿ ಯು  ಸ್ವಾಗತಿಸಿದರು, ಒಕ್ಕೂಟದ ಕಾರ್ಯದರ್ಶಿ ಉದಯ ಕುಮಾರ್ ಶರವು  ಸಾಧನಾ ವರದಿ ಮಂಡಿಸಿದರು, ಭವ್ಯ ನೂತನ ಒಕ್ಕೂಟದ ಪದಾಧಿಕಾರಿಗಳನ್ನು ಪರಿಚಯಿಸಿದರು, ಒಕ್ಕೂಟದ ಸದಸ್ಯೆ ಭಾರತಿ ರೈ ಕುದ್ಕಾಡಿ  ವಂದಿಸಿದರು ಅರಿಯಡ್ಕ ವಲಯ ಮೇಲ್ವಿಚಾರಕಿ   ಶೃತಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.