ಕೊಯ್ಯೂರು: ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಪಂಚಾಹ-2022 ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೊಯ್ಯೂರು:   ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಕೊಯ್ಯೂರು ಇದರ ಸಹಯೋಗದಲ್ಲಿ ಶ್ರೀ ಪಂಚದುರ್ಗ ಯಕ್ಷಗಾನ ಕಲಾ ಸಂಘ ಕೊಯ್ಯೂರು ಇದರ ನೇತೃತ್ವದಲ್ಲಿ ಶ್ರೀ ಪಂಚದುರ್ಗಾ ಭಜನಾ ಮಂಡಳಿ ಕೊಯ್ಯೂರು ದೇವಸ್ಥಾನ ಇದರ ಸಹಕಾರದಲ್ಲಿ ಅ.9ರಿಂದ ಅ.13ರ ವರೆಗೆ  ಸಂಜೆ 4.30 ರಿಂದ ರಾತ್ರಿ 7.30 ವರೆಗೆ ನಡೆಯುವ ಯಕ್ಷಗಾನ ತಾಳಮದ್ದಳೆ ಪಂಚಾಹ-2022 ಇದರ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ಬಿ.ಹರಿಶ್ಚಂದ್ರ ಬಳ್ಳಾಲ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ. ಅಶೋಕ್ ಕುಮಾರ್ ಬಾಂಗಿಣ್ಣಾಯ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಸಂಘದ ಪದಾಧಿಕಾರಿಗಳಾದ ಉಮೇಶ್ ಆಚಾರ್ಯ ಕೋಡಿಯೇಲು, ನಾರಾಯಣ ಭಟ್ ಬಾಸಮೆ ಮತ್ತು ವಿಜಯ್ ಕುಮಾರ್ ಎಂ ಕೊಯ್ಯೂರು ಚಿದಾನಂದ ಗುರ್ಬೊಟ್ಟು, ಮತ್ತಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here