ಬಳಂಜ: ಯುವ‌ಶಕ್ತಿ ಫ್ರೆಂಡ್ಸ್ ಕ್ಲಬ್ ವತಿಯಿಂದ ವಾಹನ ಪೂಜೆ, ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮ ಆಚರಿಸಿದ ಯುವ ಸಂಘಟನೆ

0

ಬಳಂಜ: ಯುವ ಶಕ್ತಿ ಫ್ರೆಂಡ್ಸ್ ಕ್ಲಬ್ ನಾಲ್ಕೂರು ಇದರ ವತಿಯಿಂದ ವಾಹನ ಪೂಜೆ ಕಾರ್ಯಕ್ರಮವು ಅ. 26 ರಂದು ನಿಟ್ಟಡ್ಕ ಶಾಲಾ ಮೈದಾನದಲ್ಲಿ ನಡೆಯಿತು.

ಇತ್ತೀಚೆಗೆ ನಾಲ್ಕೂರಿನಲ್ಲಿ ಹೊಸದಾಗಿ ರಚನೆಗೊಂಡ ಯುವ ಶಕ್ತಿ ಫ್ರೆಂಡ್ಸ್ ಕ್ಲಬ್ ನಾಲ್ಕೂರು ತಂಡವು ಈ ಕಾರ್ಯಕ್ರಮ ಆಯೋಜಿಸಿದ್ದು ದೀಪಾವಳಿ ಹಬ್ಬದ ಬಲಿ ಪಾಡ್ಯ ಪುಣ್ಯ ದಿನದಂದು ಊರ- ಪರವೂರ ಭಕ್ತರು ಪಾಲ್ಗೊಂಡು ವಾಹನ ಪೂಜೆಯನ್ನು ನೇರವೇರಿಸಿ ಪ್ರಸಾದ ಸ್ವೀಕರಿಸಿದರು.

ಅರ್ಚಕ ರಾಘವೇಂದ್ರ ಭಟ್ ಬಳಂಜ ಇವರ ವೈದಿಕತ್ವದಲ್ಲಿ ಸುಮಾರು‌ ನೂರಕ್ಕಿಂತ ಹೆಚ್ಚಿನ ವಾಹನಗಳಿಗೆ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಬೆಂಗಳೂರು ಉದ್ಯಮಿ ಹರೀಶ್ ಶೆಟ್ಟಿ ಕರ್ಮಿತ್ತಿಲ್ಲು,ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಸಾದ್ ಬಿ.ಎಸ್, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್,ಬಳಂಜ ಗ್ರಾ.ಪಂ ಸದಸ್ಯರಾದ ಬಾಲಕೃಷ್ಣ ಪೂಜಾರಿ,ಯಶೋಧರ ಶೆಟ್ಟಿ, ಪ್ರಗತಿಪರ ಕೃಷಿಕರಾದ ಸೀತರಾಮ‌ ಪೂಜಾರಿ ಮಜಲೋಡಿ,ಗೀರೀಶ್ ನಿಟ್ಟಡ್ಕ, ಯುವ ಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರಮುಖರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ,ಕರುಣಾಕರ ಹೆಗ್ಡೆ ಬೊಕ್ಕಸ,ಪ್ರವೀಣ್ ಡಿ.ಕೋಟ್ಯಾನ್ ದರ್ಖಾಸು,ರಂಜಿತ್ ಮಜಲಡ್ಡ, ಯೋಗೀಶ್ ಆರ್ ಯೈಕುರಿ,ಶರತ್ ಅಂಚನ್ ಬಾಕ್ಯರಡ್ಡ,ಯತೀಶ್ ವೈ.ಎಲ್ ಬಳಂಜ, ಸಂತೋಷ್ ಕುಮಾರ್ ಹಿಮರಡ್ಡ, ಸಂಪತ್ ಕೋಟ್ಯಾನ್ ಪುಣ್ಕೆದೊಟ್ಟು,ಜಗದೀಶ್ ಪೂಜಾರಿ ತಾರಿಪಡ್ಪು,ಸುಧೀಶ್ ಪೂಜಾರಿ ತಾರಿಪಡ್ಪು,ವಿಜಯ ಪೂಜಾರಿ ಯೈಕುರಿ,ಪ್ರಶಾಂತ್ ಮಜಲೋಡಿ,ಚಂದ್ರಹಾಸ ಬಳಂಜ, ಪ್ರಣಾಮ್ ಶೆಟ್ಟಿ ಖಂಡಿಗ, ಮಹೇಶ್ ಕುಲಾಲ್ ನಾಲ್ಕೂರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here