ಪಡ್ಡಂದಡ್ಕ:  ಜ್ವರದಿಂದ ಯುವಕ ಬಲಿ

0

ವೇಣೂರು: ಜ್ವರದಿಂದ ಬಳಲುತ್ತಿದ್ದ ಪಡ್ಡಂದಡ್ಕ ಕಜೆಮನೆ ನಿವಾಸಿ, ವೇಣೂರು ಶ್ರೀ ಪಾರ್ಶ್ವನಾಥ ಪ್ರಿಂಟರ್‍ಸ್‌ನಲ್ಲಿ  ಕೆಲಸ ನಿರ್ವಹಿಸುತ್ತಿದ್ದ ಕಿಶೋರ್ ಆಚಾರ್ಯ (22ವ) ಇವರು ಅ.26 ರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಕೃಷ್ಣಯ್ಯ ಮತ್ತು ಪದ್ಮಾವತಿ ದಂಪತಿಯ ಪುತ್ರ ಕಿಶೋರ್ ಆಚಾರ್ಯ ಅವರಿಗೆ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದಿದ್ದರು.

ಆದರೆ ಅ. 26ರಂದು ಜ್ವರ ಮತ್ತೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಜ್ವಾಂಡೀಸ್‌ಗೆ ತಿರುಗಿ ಚಿಕಿತ್ಸೆಗೆ ಸ್ಪಂದಿಸದೇ ಅಂದೇ ರಾತ್ರಿ ಮೃತಪಟ್ಟಿದ್ದಾರೆ.

ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

LEAVE A REPLY

Please enter your comment!
Please enter your name here